UAS Raichur Diploma Course: ರಾಯಚೂರು ಕೃಷಿ ವಿವಿಯಿಂದ ಡಿಪ್ಲೊಮಾ ಕೋರ್ಸ್ ಪ್ರವೇಶ 2025: ಅರ್ಜಿ ಆಹ್ವಾನ ಆರಂಭ!
ಕೃಷಿ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಲು ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಶುಭವಾದಿ ಸುದ್ದಿ! ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು (UAS Raichur) 2025-26ನೇ ಶೈಕ್ಷಣಿಕ ಸಾಲಿಗೆ ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಕೋರ್ಸ್‌ನಲ್ಲಿ ಸೇರಲು ಬೇಕಾದ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಶುಲ್ಕದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಅರ್ಹತಾ ಮಾನದಂಡಗಳು
ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು:
- ಶೈಕ್ಷಣಿಕ ಅರ್ಹತೆ: ಎಸ್.ಎಸ್.ಎಲ್.ಸಿ (SSLC) ಪರೀಕ್ಷೆಯಲ್ಲಿ ಕನ್ನಡ ಭಾಷೆಯೊಂದಿಗೆ ಕನಿಷ್ಠ ಶೇ.45 ಅಂಕಗಳು ಪಡೆದು ಉತ್ತೀರ್ಣರಾಗಿರಬೇಕು. ಪ.ಜಾ./ಪ.ಪಂ./ಪ್ರವರ್ಗ-1 ವಿದ್ಯಾರ್ಥಿಗಳಿಗೆ ಕನಿಷ್ಠ ಶೇ.40 ಅಂಕಗಳು ಸಾಕು.
- ವಯೋಮಿತಿ: ಅರ್ಜಿ ಸಲ್ಲಿಸುವ ದಿನಾಂಕ (28-07-2025)ಕ್ಕೆ ಅಭ್ಯರ್ಥಿಯ ವಯಸ್ಸು 19 ವರ್ಷವನ್ನಾಗಿರಬಾರದು.
ರಾಯಚೂರು ಕೃಷಿ ವಿವಿಯು ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ.50 ರಷ್ಟು ಸೀಟುಗಳನ್ನು ಮೀಸಲಿಟ್ಟಿದೆ. ರೈತರ ಮಗುವೆಂಬುದನ್ನು ಸಾಬೀತುಪಡಿಸಲು ಕೃಷಿ ಪ್ರಮಾಣ ಪತ್ರವನ್ನು ಅರ್ಜಿಗೆ ಲಗತ್ತಿಸುವುದು ಕಡ್ಡಾಯ.
ಮುಖ್ಯ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ: 28 ಜೂನ್ 2025
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 30 ಜುಲೈ 2025
- ಡಿ.ಡಿ ತೆಗೆಯುವ ಕೊನೆ ದಿನಾಂಕ: 30 ಜುಲೈ 2025
ಅರ್ಜಿ ಶುಲ್ಕದ ವಿವರ
- ಸಾಮಾನ್ಯ ವರ್ಗ: ₹500/-
- ಪ.ಜಾ./ಪ.ಪಂ./ಪ್ರವರ್ಗ-1: ₹250/-
ಎಸ್.ಬಿ.ಐ (SBI) ಬ್ಯಾಂಕಿನ ಯಾವುದೇ ಶಾಖೆಯಲ್ಲಿ ಡಿಮ್ಯಾಂಡ್ ಡ್ರಾಫ್ಟ್ (DD) ತೆಗೆಯುವುದು ಕಡ್ಡಾಯ.
ಅರ್ಜಿ ಸಲ್ಲಿಸುವ ವಿಧಾನ
- ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ ಅಥವಾ ವಿವಿಯ ಆಫೀಸಿನಲ್ಲಿ ಪಡೆಯಬಹುದು.
- ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಡಿ.ಡಿಯನ್ನು ಜೊತೆಗೆ ಹಾಕಿ.
- ಅರ್ಜಿ ಪತ್ರವನ್ನು ಈ ವಿಳಾಸಕ್ಕೆ ಕಳುಹಿಸಬೇಕು:ಕುಲಸಚಿವರು,
ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ,
ಲಿಂಗಸುಗೂರು ರಸ್ತೆ, ರಾಯಚೂರು – 584104ಅರ್ಜಿ ಕಳುಹಿಸಲು ಅಂತಿಮ ದಿನಾಂಕ: 28-07-2025 (ಸಂಜೆ 4.00 ಗಂಟೆ)ಇದನ್ನು ಓದಿ : SSC Requerment: MTS & ಹವಾಲ್ದಾರ್ ನೇಮಕಾತಿ ಕೇಂದ್ರ ಸರ್ಕಾರದ 1075 ಹುದ್ದೆಗಳ ಭರ್ತಿ – ಸಂಪೂರ್ಣ ಮಾಹಿತಿ!
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ ಪ್ರತಿಗೆ
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ
- ವಿದ್ಯಾರ್ಥಿಯ ಪೋಟೋ
- ಕೃಷಿಕರ ಮಗುವಾದರೆ ಕೃಷಿ ಪ್ರಮಾಣ ಪತ್ರ
- ಕನ್ನಡ ವ್ಯಾಸಂಗ ಪ್ರಮಾಣ ಪತ್ರ
- ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಸಂಪೂರ್ಣವಾಗಿ ಮೆರಿಟ್ ಆಧಾರದ ಮೇಲೆ ನಡೆಯಲಿದೆ. ಸರ್ಕಾರದ ನಿಯಮಾನುಸಾರ ರೋಸ್ಟರ್ ಪದ್ದತಿ ಅನ್ವಯ ಸೀಟುಗಳ ಭರ್ತಿಯನ್ನು ಮಾಡಲಾಗುತ್ತದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಹಾಗೂ ಮಾಹಿತಿಯನ್ನು ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಇದನ್ನು ಓದಿ : KCC Loan Scheme: ರೈತರಿಗೆ ₹3 ಲಕ್ಷದವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ!
ವಿವರಕ್ಕಾಗಿ ಅಧಿಕೃತ ವೆಬ್‌ಸೈಟ್: Raichur Official Website