SSP Scholarship Apply Start: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ.
ಈಗ ನಮ್ಮ ರಾಜ್ಯದಲ್ಲಿ 9ನೇ ತರಗತಿ ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ನಂತರದ ಕೋರ್ಸ್ಗಳದಂತ ಡಿಪ್ಲೋಮೋ, ಡಿಗ್ರಿ ಇನ್ನು ಹಲವಾರು ರೀತಿಯ ಶೈಕ್ಷಣಿಕ ಕೋರ್ಸುಗಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈಗ ಸರ್ಕಾರದ ಕಡೆಯಿಂದ SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು ಈಗ ಸರ್ಕಾರ ಪ್ರಾರಂಭ ಮಾಡಿದೆ. ಅದೇ ರೀತಿಯಾಗಿ ಈಗ ರಾಜ್ಯ ಸರ್ಕಾರ ಆಗಲಿ ಅಥವಾ ಭಾರತ ಸರ್ಕಾರ ವಾಗಲಿ ನೀಡುವಂತಹ ಅನೇಕ ಶಿಕ್ಷಣ ಯೋಜನೆಗಳಿಗೆ ನೀಡುವ ವಿದ್ಯಾರ್ಥಿ ವೇತನಗಳಿಗೆ SSP ವೆಬ್ಸೈಟ್ನ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಹಾಗಿದ್ದರೆ ಈಗ ರಾಜ್ಯ ಸರ್ಕಾರವು SSP ಪೋರ್ಟಲ ಬಿಡುಗಡೆ ಮಾಡಿದ್ದು. ಈ ಒಂದು ವೆಬ್ಸೈಟ್ನಲ್ಲಿ ಈಗ ನಿಮಗೆ ಎಲ್ಲಾ ರೀತಿಯಾದಂತಹ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಯಾವೆಲ್ಲ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು
ಈಗ ನಮ್ಮ ರಾಜ್ಯ ಅಥವಾ ಕೇಂದ್ರ ಸರ್ಕಾರದ ಆಯೋಗದ ಅಡಿಯಲ್ಲಿ ಇರುವಂತಹ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವೃತ್ತಿಪರ ಕೋರ್ಸ್ ಗಳಿಗೆ ವಿದ್ಯಾರ್ಥಿ ವೇತನ ಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಹಾಗೆ 9 ಮತ್ತು 10ನೇ ತರಗತಿಯ ನಂತರದ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಈಗಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಏನು?
- ವಿದ್ಯಾರ್ಥಿ ಆಧಾರ್ ಕಾರ್ಡ್
- ವಿದ್ಯಾಭ್ಯಾಸದ ಅಂಕ ಪಟ್ಟಿಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಶಾಲಾ ಕಾಲೇಜು ಪ್ರವೇಶ ಪತ್ರ
- ಬ್ಯಾಂಕ್ ಖಾತೆ ವಿವರ
- ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
- ಈಗ ಈ ಒಂದು SSP ಪೋರ್ಟಲ್ ಗೆ ಮೊದಲು ನೀವು ಭೇಟಿಯನ್ನು ನೀಡಿ. ಅದರಲ್ಲಿ ಅಪ್ಲೈ ನೌ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
- ಒಂದು ವೇಳೆ ನೀವೇನಾದರೂ ಹೊಸಬಳಕೆದಾರರಾಗಿದ್ದರೆ ಬಳಕೆದಾರರ ಐಡಿ ಮತ್ತು ಪಾಸ್ವರ್ಡ್ ಅನ್ನು ರಚನೆ ಮಾಡಿಕೊಳ್ಳಬೇಕಾಗುತ್ತದೆ.
- ಆನಂತರ ಒಂದು ಫಾರ್ಮ ಓಪನ್ ಆಗುತ್ತೆ ನೀವು ಅದರಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿ ಮತ್ತು ಅಪ್ಲೋಡ್ ಮಾಡಬೇಕಾಗುತ್ತದೆ.
- ಆನಂತರ ನೀವು ಕೊನೆಯಲ್ಲಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.