SSC JE Requerment 2025: 1340 ಗ್ರೂಪ್ ಬಿ ಹುದ್ದೆಗಳ ಭರ್ಜರಿ ಅವಕಾಶ!
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 1340 ಜೂನಿಯರ್ ಎಂಜಿನಿಯರ್ (JE) ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಆಯೋಗ (SSC) ಇದೀಗ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ತಾಂತ್ರಿಕ ಪದವಿ ಅಥವಾ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳಿಗೆ ಇದು ಸರಿಯಾದ ಅವಕಾಶ.
ಈ ನೇಮಕಾತಿಯ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ಓದಿ ಮತ್ತು ಅರ್ಜಿ ಸಲ್ಲಿಸುವ ಮುನ್ನ ನಿಖರ ಮಾಹಿತಿಯನ್ನು ತಿಳಿದುಕೊಳ್ಳಿ.
ಹುದ್ದೆಗಳ ವಿವರ
ವಿಭಾಗ | ವಿವರ |
ನೇಮಕಾತಿ ಸಂಸ್ಥೆ | ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) |
ಹುದ್ದೆ ಹೆಸರು | ಜೂನಿಯರ್ ಎಂಜಿನಿಯರ್ (JE) |
ಹುದ್ದೆಗಳ ಸಂಖ್ಯೆ | 1340 |
ನೇಮಕಾತಿ ಪ್ರದೇಶ | ಭಾರತದಾದ್ಯಂತ |
ಅರ್ಜಿ ವಿಧಾನ | ಆನ್‌ಲೈನ್ (Online) |
ಇದನ್ನು ಓದಿ : Bele Vime 2025-26: ತೋಟಗಾರಿಕೆ ವಿಮೆ ಮಾಡಲು ಅರ್ಜಿ ಆಹ್ವಾನ!
ಶೈಕ್ಷಣಿಕ ಅರ್ಹತೆ
ಸಿವಿಲ್ ಇಂಜಿನಿಯರಿಂಗ್
- ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೋಮಾ ಅಥವಾ ಡಿಗ್ರಿ.
ಎಲೆಕ್ಟ್ರಿಕಲ್/ಮೆಕ್ಯಾನಿಕಲ್ ಇಂಜಿನಿಯರಿಂಗ್
- ಸಂಬಂಧಿತ ಶಾಖೆಯಲ್ಲಿ ಡಿಪ್ಲೋಮಾ ಅಥವಾ ಡಿಗ್ರಿ.
- ಕೆಲವು ಹುದ್ದೆಗಳಿಗೆ ಅನುಭವ ಅಗತ್ಯವಿರಬಹುದು.
ವಯೋಮಿತಿ
ಹುದ್ದೆಗಳ ಪ್ರಕಾರ | ಗರಿಷ್ಠ ವಯಸ್ಸು |
ಸಾಮಾನ್ಯ ಹುದ್ದೆಗಳು | 30 ವರ್ಷ |
CPWD ಮತ್ತು ಕೆಲವು ಇಲಾಖೆ | 32 ವರ್ಷ |
ವಿಶೇಷ ಸೂಚನೆ
ವಯಸ್ಸು ಲೆಕ್ಕಾಚಾರ 01-01-2026 ನ ಹಿನ್ನಲೆಯಲ್ಲಿ ಮಾಡಲಾಗುತ್ತದೆ.
ಇದನ್ನು ಓದಿ : IBPS PO Requerment 2025: ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸೊನೆಲ್ ಸೆಲೆಕ್ಷನ್ ನಲ್ಲಿ 5,208 ಹುದ್ದೆಗಳಿಗೆ ಭರ್ಜರಿ ಅವಕಾಶ!
ವಿನಾಯಿತಿ
ವರ್ಗ | ವಯೋಮಿತಿ ವಿನಾಯಿತಿ |
SC/ST | 5 ವರ್ಷಗಳು |
OBC | 3 ವರ್ಷಗಳು |
ಅಂಗವಿಕಲ | 10-15 ವರ್ಷಗಳು |
ಮಾಜಿ ಸೈನಿಕರು | 3 ವರ್ಷ ಸೇವೆ ಕಡಿತ |
ವೇತನ ಶ್ರೇಣಿ
- ಮಟ್ಟ–6 (7ನೇ ವೇತನ ಆಯೋಗ): ₹35,400 – ₹1,12,400
- DA, HRA, TA, ಮೆಡಿಕಲ್, ಪಿಂಚಣಿ ಮುಂತಾದ ಎಲ್ಲಾ ಸೌಲಭ್ಯಗಳು ಲಭ್ಯವಿದೆ.
ಆಯ್ಕೆ ವಿಧಾನ
- ಪೇಪರ್-I (CBT) – ವಸ್ತುನಿಷ್ಠ ಪ್ರಶ್ನೆಗಳು
- ಪೇಪರ್-II (CBT) – ತಾಂತ್ರಿಕ ವಿಷಯ
- ದಾಖಲೆ ಪರಿಶೀಲನೆ
ಪರೀಕ್ಷಾ ಮಾದರಿ
ಪೇಪರ್-I (200 ಅಂಕ – 2 ಗಂಟೆ)
ವಿಷಯ | ಪ್ರಶ್ನೆಗಳು | ಅಂಕಗಳು |
General Intelligence & Reasoning | 50 | 50 |
General Awareness | 50 | 50 |
General Engineering (ತಮ್ಮ ಶಾಖೆಯಲ್ಲಿ) | 100 | 100 |
ನೆಗಟಿವ್ ಮಾರ್ಕಿಂಗ್: ಪ್ರತಿಯೊಂದು ತಪ್ಪು ಉತ್ತರಕ್ಕೆ 0.25 ಅಂಕ ಕಡಿತ.
ಇದನ್ನು ಓದಿ : Ration KYC Update: E-KYC ಮಾಡದಿದ್ರೆ ರೇಷನ್ ಸಿಗಲ್ಲ! ಅಂತಿಮ ದಿನಾಂಕ ತಡ ಮಾಡಿದ್ರೆ ರೇಷನ್ ಕಾರ್ಡ್ ರದ್ದು!
ಪೇಪರ್-II (300 ಅಂಕ – 2 ಗಂಟೆ)
ವಿಷಯ ಆಯ್ಕೆ (ಅಭ್ಯರ್ಥಿಯ ಶಾಖೆಯ ಆಧಾರದಲ್ಲಿ):
- ಭಾಗ-ಎ: ಸಿವಿಲ್
- ಭಾಗ-ಬಿ: ಎಲೆಕ್ಟ್ರಿಕಲ್
- ಭಾಗ-ಸಿ: ಮೆಕ್ಯಾನಿಕಲ್
ನೆಗಟಿವ್ ಮಾರ್ಕಿಂಗ್: ಪ್ರತಿಯೊಂದು ತಪ್ಪು ಉತ್ತರಕ್ಕೆ 1 ಅಂಕ ಕಡಿತ.
ಪರೀಕ್ಷಾ ಕೇಂದ್ರಗಳು
- ಬೆಂಗಳೂರು
- ಮೈಸೂರು
- ಮಂಗಳೂರು
- ಶಿವಮೊಗ್ಗ
- ಉಡುಪಿ
- ಕಲಬುರಗಿ
- ಹುಬ್ಬಳ್ಳಿ
- ಬೆಳಗಾವಿ
ಕನಿಷ್ಠ 3 ಪರೀಕ್ಷಾ ಕೇಂದ್ರ ಆಯ್ಕೆ ಮಾಡುವುದು ಕಡ್ಡಾಯ.
ದಿನಾಂಕಗಳು
ಅಧಿಸೂಚನೆ ಬಿಡುಗಡೆ | 30 ಜೂನ್ 2025 |
ಅರ್ಜಿ ಪ್ರಾರಂಭ | 30 ಜೂನ್ 2025 |
ಅರ್ಜಿ ಕೊನೆದಿನ | 21 ಜುಲೈ 2025 (11:00 ರಾತ್ರಿಯಿಂದ ಮುಚ್ಚಲ್ಪಡುತ್ತದೆ) |
ಶುಲ್ಕ ಪಾವತಿ ಕೊನೆ | 22 ಜುಲೈ 2025 |
ತಿದ್ದುಪಡಿ ದಿನಾಂಕ | 01-02 ಆಗಸ್ಟ್ 2025 |
ಪೇಪರ್-I ಪರೀಕ್ಷೆ | 27 ಅಕ್ಟೋಬರ್ – 31 ಅಕ್ಟೋಬರ್ 2025 |
ಪೇಪರ್-II ಪರೀಕ್ಷೆ | ಜನವರಿ–ಫೆಬ್ರವರಿ 2026 |
ದಾಖಲೆ ಪರಿಶೀಲನೆ | ಪರೀಕ್ಷೆಯ ನಂತರ ಪ್ರಕಟಣೆ |
ಪ್ರಮುಖ ಲಿಂಕ್‌ಗಳು
SSC ಅಧಿಕೃತ ವೆಬ್‌ಸೈಟ್: ssc.nic.in