Ration Card Update: ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯೇ! ಈ ಕೂಡಲೇ ಅನರ್ಹರ ರೇಷನ್ ಕಾರ್ಡ್ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಿ? ಇಲ್ಲಿದೆ ಮಾಹಿತಿ.

Ration Card Update: ನಿಮ್ಮ ರೇಷನ್ ಕಾರ್ಡ್ ರದ್ದಾಗಲಿದೆಯೇ! ಈ ಕೂಡಲೇ ಅನರ್ಹರ ರೇಷನ್ ಕಾರ್ಡ್ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಿ? ಇಲ್ಲಿದೆ ಮಾಹಿತಿ.

ನಮಸ್ಕಾರಗಳು ಸಮಸ್ತ ನಾಡಿನ ಜನತೆಗೆ ನಾವು ಈಗ ಈ ಒಂದು ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ ರಾಜ್ಯ ಸರ್ಕಾರವು ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈಗ ಪ್ರತಿ ತಿಂಗಳು ಕೂಡ ಈಗ ಅನರ್ಹರ ಪಡಿತರ ಚೀಟಿಗಳನ್ನು ಪರಿಶೀಲನೆ ಮಾಡಿ. ಅವುಗಳನ್ನು ರದ್ದು ಮಾಡುವಂತಹ ಕಾರ್ಯವನ್ನು ಈಗ ನಿರಂತರವಾಗಿ ನಡೆಸುತ್ತದೆ. ಒಂದು ವೇಳೆ ಅದರಲ್ಲಿ ಈಗ ಅನರ್ಹ ಎಂದು ಗುರುತಿಸಲಾದಂತಹ ಪಡಿತರ ಚೀಟಿ ದಾರದ ಪಟ್ಟಿಯಲ್ಲಿ ಈಗ ಈ ಒಂದು ಆಹಾರ ಇಲಾಖೆಯು ತನ್ನ ಅಧಿಕೃತ ತಂತ್ರಾಂಶದಲ್ಲಿ ಈಗ ಪ್ರಕಟಣೆ ಮಾಡುತ್ತದೆ.

WhatsApp Float Button

Ration Card Update

ಹಾಗೆ ಈಗ ನೀವು ಈ ಒಂದು ಪಟ್ಟಿಯನ್ನು ಈಗ ಸಾರ್ವಜನಿಕರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಹೇಗೆ ಚೆಕ್ ಮಾಡಿಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಒಂದು ವೇಳೆ ಆ ಒಂದು ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮ್ಮ ಪಡಿತರ ಚೀಟಿಗೆ ಅಂದರೆ ರೇಷನ್ ಕಾರ್ಡ್ ರದ್ದಾಗಿರಬಹುದು. ಆದಕಾರಣ ನೀವು ಕೂಡ ಈಗಲೇ ಹೋಗಿ ಪರಿಶೀಲನೆಯನ್ನು ಮಾಡಿಕೊಳ್ಳಿ.

ನಿಮ್ಮ ರೇಷನ್ ಕಾರ್ಡ್ ಏಕೆ ರದ್ದಾಗುತ್ತದೆ

ಸ್ನೇಹಿತರೆ ಈಗ ನಮ್ಮ ರಾಜ್ಯದಲ್ಲಿ ಹಲವಾರು ಕುಟುಂಬಗಳು ಪಡಿತರ ಚೀಟಿಗಳ ಆಧಾರದ ಮೇಲೆ ರಾಜ್ಯ ಸರ್ಕಾರದಿಂದ ಆಹಾರಧಾನ್ಯಗಳನ್ನು ಈಗಾಗಲೇ ಪಡೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕೆಲವೊಂದು ನಿಯಮಗಳ ಅನುಸಾರವಾಗಿ ಅರ್ಹತೆಯನ್ನು ಹೊಂದಿಲ್ಲದೆ ಇರುವಂಥವರು ಅಥವಾ ಸರಿಯಾದ ದಾಖಲೆಗಳನ್ನು ನೀಡದಿರುವವರು ಹಾಗೆಯೇ ಸೌಲಭ್ಯವನ್ನು ಪಡೆಯದೇ ಇರುವವರ  ಕಂಡು ಬಂದಾಗ ಅಂಥವರ ಪಡಿತರ ಚೀಟಿಗಳನ್ನು ಈಗ ಸರ್ಕಾರ ರದ್ದು ಮಾಡಲು ಮುಂದಾಗಿದೆ. ಸ್ನೇಹಿತರು ಈಗ ಈ ಕೆಳಗೆ ನೀಡಿರುವಂತಹ ಕಾರಣಗಳಿಗೆ ರೇಷನ್ ಕಾರ್ಡ್ ರದ್ದು ಮಾಡಲಾಗುತ್ತದೆ.

  • ಮೊದಲಿಗೆ ಸ್ನೇಹಿತರೆ ಕುಟುಂಬದ ವಾರ್ಷಿಕ ಆದಾಯವು ಈಗ ಸರಕಾರವು ನೀಡಿರುವಂತಹ ಆದಾಯದ ಮಿತಿಗಿಂತ ಹೆಚ್ಚಿಗೆ ಇದ್ದರೆ ಅಂತವರ ರೇಷನ್ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ.
  • ಆನಂತರ ಸ್ನೇಹಿತರೆ ಈಗ ಯಾರೆಲ್ಲಾ ಆದಾಯ ತೆರಿಗೆಗಳನ್ನು ಪಾವತಿ ಮಾಡುತ್ತಾ ಇರುತ್ತಾರೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗುತ್ತದೆ.
  • ಆನಂತರ ಸ್ನೇಹಿತರೆ ಸರ್ಕಾರಿ ಉದ್ಯೋಗ ಹಾಗೂ ಪಿಂಚಣಿಯನ್ನು ಪಡೆದುಕೊಳ್ಳುತ್ತಿರುವ ಸದಸ್ಯರ ರೇಷನ್ ಕಾರ್ಡ್ಗಳನ್ನು ಕೂಡ ಸ್ಥಗಿತ ಮಾಡಲಾಗುತ್ತದೆ.
  • ಆನಂತರ ಸ್ನೇಹಿತರ ನೀವು ನಿಮ್ಮ ರೇಷನ್ ಕಾರ್ಡ್ ಗೆ Ekyc ಅನ್ನು  ಮಾಡಿಕೊಂಡಿರಬೇಕಾಗುತ್ತದೆ. ಒಂದು ವೇಳೆ ಅದನ್ನು ಮಾಡಿಸದೆ ಇದ್ದರೆ ಈ ನಿಮ್ಮ ರೇಷನ್ ಕಾರ್ಡ್ ಅನ್ನು ಸ್ಥಗಿತ ಮಾಡಲಾಗುತ್ತದೆ.
  •  ಈಗ ರೇಷನ್ ಕಾರ್ಡನ್ನು ಮಾಡಿಸುವಂತಹ ಸಮಯದಲ್ಲಿ ನಕಲಿ ದಾಖಲೆ ನೀಡಿ ಪಡಿತರ ಪಡೆದುಕೊಂಡವರ ರೇಷನ್ ಕಾರ್ಡ್ ಕೂಡ ಈಗ ರದ್ದು ಮಾಡಲಾಗುತ್ತದೆ.

ಹಾಗೆ ಸ್ನೇಹಿತರೆ ಈಗ ಆಹಾರ ಇಲಾಖೆಯು ತನ್ನ ವೆಬ್ ಸೈಟ್ ನಲ್ಲಿ ಅನರ್ಹ ಪತ್ತೆ ಮೊದಲು ಆನಂತರ ಹೊಸ ಪಡಿತರ ಚೀಟಿ ಎಂಬ ಘೋಷ ವಾಕ್ಯವನ್ನು ಈಗ ಪ್ರಕಟಣೆ ಮಾಡಲಾಗಿದೆ. ಆದಕಾರಣ ಈಗ ಪ್ರತಿ ತಿಂಗಳು ಕಾಲ ಕಾಲಕ್ಕೆ ತಾಲೂಕುವಾರು ಅನರ್ಹರ ರೇಷನ್ ಕಾರ್ಡ್ ಗಳ ಪಟ್ಟಿಯನ್ನು ಈಗ ಆಹಾರ ಇಲಾಖೆಯ ಅಧಿಕೃತ ತಂತ್ರಾಂಶಗಳಲ್ಲಿ ಈಗ ಬಿಡುಗಡೆ ಮಾಡಲಾಗುತ್ತದೆ. ಈಗ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ನಾವು ಈ ಕೆಳಗೆ ತಿಳಿಸಿರುವ ವಿಧಾನಗಳನ್ನು ಅನುಸರಿಸುವುದರ ಮೂಲಕ ಈಗ ನೀವು ನಿಮ್ಮ ಮೊಬೈಲ್ ನಲ್ಲಿಯೇ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಇಲ್ಲವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಅನರ್ಹ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ?

ನೀವು ನಿಮ್ಮ ರೇಷನ್ ಕಾರ್ಡ್ ಅರ್ಹರು ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ಮೊದಲಿಗೆ ಈ ಲಿಂಕಿನ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ಆಹಾರ ಇಲಾಖೆಯ ವೆಬ್ಸೈಟ್ ಗೆ ನೀವು ಭೇಟಿಯನ್ನು ನೀಡಬೇಕಾಗುತ್ತದೆ.

ಆನಂತರ ಅದರಲ್ಲಿ ಮುಖಪುಟದಲ್ಲಿ ಗೋಚರಿಸುವಂತಹ ಈ ಸೇವೆಗಳು ಎಂಬ ವಿಭಾಗದ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಆನಂತರ ಎಡಬದಿಯಲ್ಲಿ ಕಾಣುವ ಈ ಪಡಿತರ ಚೀಟಿ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ. ತದನಂತರ ಸ್ನೇಹಿತರೆ ಅದರಲ್ಲಿ ರದ್ದುಗೊಂಡ ಅಥವಾ ತಡೆಹಿಡಿಯಲಾದ ಪಟ್ಟಿ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಿ. ಆ ಒಂದು ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಮತ್ತೊಂದು ಹೊಸ ಪುಟ ಓಪನ್ ಆಗುತ್ತದೆ.

ಆ ಒಂದು ಪುಟದಲ್ಲಿ ನೀವು ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಮತ್ತು ವರ್ಷಗಳನ್ನು ಆಯ್ಕೆ ಮಾಡಿಕೊಂಡು ಗೋ ಎಂಬುದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ. ಆನಂತರ ನಿಮ್ಮ ತಾಲೂಕಿನಲ್ಲಿ ರದ್ದುಗೊಂಡ ಪಡಿತರ ಚೀಟಿಗಳ ಪಟ್ಟಿ ಓಪನ್ ಆಗುತ್ತದೆ. ಆಗ ಅದರಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುದನ್ನು  ಒಂದು ಬಾರಿ ಚೆಕ್ ಮಾಡಿ.

EKYC ಮಾಡಿಸದೆ ಇದ್ದರೆ ರೇಷನ್ ಕಾರ್ಡ್ ಬಂದ್!

ಈಗ ಸ್ನೇಹಿತರೆ ಆಹಾರ ಇಲಾಖೆ ಅಧಿಕೃತ ಸೂಚನೆಯಂತೆ ಈಗ ಪ್ರತಿ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ತಮ್ಮ ವಿವರಗಳನ್ನು ನವಕರಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಕೂಡ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ನ ಮೂಲಕ Ekyc ಅನ್ನು  ಮಾಡಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವೇನಾದರೂ ಅವುಗಳನ್ನು ಮಾಡಿಸದೆ ಇದ್ದರೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಳ್ಳಬಹುದು.

Ekyc  ಆಗಿರುವುದನ್ನು ಚೆಕ್ ಮಾಡುವುದು ಹೇಗೆ?

ಈಗ ನಿಮ್ಮ ರೇಷನ್ ಕಾರ್ಡ್ EKYC ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಿ. ನೀವು ಈ ಲಿಂಕ್ ನ ಮೇಲೆ ಕ್ಲಿಕ್ ಮಾಡಿಕೊಂಡು ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಆನಂತರ ಅದರಲ್ಲಿ ಈ ಸ್ಥಿತಿ ಕಾಲಂನಲ್ಲಿ ಕಾಣುವಂತಹ ಹಾಲಿ ಪಡಿತರ ಸ್ಟೇಟಸ್ ಎಂಬ ಸ್ಥಿತಿ ಬಟನ ಮೇಲೆ ಕ್ಲಿಕ್ ಮಾಡಿಕೊಂಡು ಆನಂತರ ನಿಮ್ಮ ಕಾರ್ಡಿನ ಸ್ಥಿತಿ ಮತ್ತು EKYC  ಮುಗಿದಿದೆ ಎಂಬ ಮಾಹಿತಿ ನಿಮಗೆ ತಕ್ಷಣ ದೊರೆಯುತ್ತದೆ.

ಒಂದು ವೇಳೆ ಸ್ನೇಹಿತರೆ ನಿಮ್ಮ ಹೆಸರು ಅನರ್ಹರ ಪಟ್ಟಿಯಲ್ಲಿ ಇದ್ದರೆ ಅಥವಾ ನೀವು EKYC ಮಾಡಿಸದೆ ಇದ್ದರೆ ನಿಮಗೆ ನೀವು ತಕ್ಷಣವೇ ನಿಮ್ಮ ಹತ್ತಿರ ಇರುವಂತ ನ್ಯಾಯಬೆಲೆ ಅಂಗಡಿಗೆ ಹೋಗಿ. ನೀವು ಎಲ್ಲಾ ದಾಖಲೆಗಳನ್ನು ನೀಡುವುದರ ಮೂಲಕ ನಿಮ್ಮ EKYC ಅನ್ನು  ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ.

WhatsApp Group Join Now
Telegram Group Join Now

Leave a Comment

error: Content is protected !!