PMKSY Scheme: ರೈತರ ಉದ್ಧಾರಕ್ಕೆ ₹6,520 ಕೋಟಿ! ಕೇಂದ್ರದಿಂದ ಕಿಸಾನ್ ಸಂಪದ ಯೋಜನೆಗೆ ಬಂಪರ್ ಅನುದಾನ!

WhatsApp Group Join Now
Telegram Group Join Now

PMKSY Scheme: ರೈತರ ಉದ್ಧಾರಕ್ಕೆ ₹6,520 ಕೋಟಿ! ಕೇಂದ್ರದಿಂದ ಕಿಸಾನ್ ಸಂಪದ ಯೋಜನೆಗೆ ಬಂಪರ್ ಅನುದಾನ!

ರೈತರ ಕಷ್ಟಗಳಿಗೆ ಪರಿಹಾರ ನೀಡಿ, ಅವರ ಆದಾಯವನ್ನು ಹೆಚ್ಚಿಸುವ ದಿಟ್ಟ ಹೆಜ್ಜೆಯೊಂದನ್ನು ಕೇಂದ್ರ ಸರ್ಕಾರ ಇತ್ತೆಳೆದಿದ್ದು, “ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (PMKSY)”ಗೆ ₹6,520 ಕೋಟಿ ಅನುದಾನವನ್ನು ಮಂಜೂರು ಮಾಡಿದೆ. ಆಹಾರ ಸಂಸ್ಕರಣಾ ವಲಯವನ್ನು ಶಕ್ತಿಶಾಲಿಯಾಗಿಸಿ, ಗ್ರಾಮೀಣ ಆರ್ಥಿಕತೆಗೆ ಬಲ ನೀಡುವ ಉದ್ದೇಶವಿರುವ ಈ ಯೋಜನೆಯು 2021ರಿಂದ 2026ರ ಅವಧಿಗೆ ಜಾರಿಗೆ ಬರಲಿದೆ.

WhatsApp Float Button

PMKSY Scheme

WhatsApp Float Button

ಯೋಜನೆಯ ಉದ್ದೇಶ ಮತ್ತು ಗುರಿ ಏನು?

ಈ ಯೋಜನೆಯ ಪ್ರಾಥಮಿಕ ಗುರಿ ಅಂದರೆ ರೈತರ ಉತ್ಪನ್ನಗಳಿಗೆ ಮೌಲ್ಯವರ್ಧನೆ ನೀಡುವುದು, ಆಹಾರ ಸಂಸ್ಕರಣಾ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವಕಾಶಗಳನ್ನು ಸೃಷ್ಟಿಸುವುದು. ಯೋಜನೆಯಡಿ ಈಗಾಗಲೇ ₹1,920 ಕೋಟಿ ಹೆಚ್ಚುವರಿ ಅನುದಾನವನ್ನು ಸಹ ಮೀಸಲಿಡಲಾಗಿದೆ.

WhatsApp Float Button

ಅಭಿವೃದ್ಧಿಯಾಗುವ ಹೊಸ ಮೂಲಸೌಕರ್ಯಗಳು

  • ದೇಶದಾದ್ಯಾಂತ 100 ಹೊಸ ಫುಡ್ ಟೆಸ್ಟಿಂಗ್ ಲ್ಯಾಬ್‌ಗಳು ನಿರ್ಮಾಣವಾಗಲಿವೆ
  • 50 ಬಹು ಉತ್ಪನ್ನ ಇರೆಡಿಯೇಶನ್ ಘಟಕಗಳು ಸ್ಥಾಪನೆ
  • ವರ್ಷಕ್ಕೆ 20-30 ಲಕ್ಷ ಮೆಟ್ರಿಕ್ ಟನ್ ಆಹಾರ ಉತ್ಪನ್ನಗಳ ಸಂರಕ್ಷಣೆಯ ಸಾಮರ್ಥ್ಯ
  • ಕೃಷಿ ಉತ್ಪನ್ನಗಳ shelf-life ಹೆಚ್ಚಿಸಿ ಉತ್ತಮ ಮಾರುಕಟ್ಟೆ ಬೆಲೆ ಪಡೆಯುವ ಅವಕಾಶ

ರೈತರಿಗೆ ನೇರ ಲಾಭ ಹೇಗೆ?

  • ಆಹಾರ ವ್ಯರ್ಥತೆ ತೀವ್ರವಾಗಿ ಇಳಿಯಲಿದೆ
  • ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ
  • ಹೆಚ್ಚಿನ ದಿನಗಳವರೆಗೆ ಉತ್ಪನ್ನಗಳನ್ನು ತಾಜಾ ಇಟ್ಟು ಮಾರಾಟ ಮಾಡುವ ಅನುಕೂಲ
  • ಗ್ರಾಮೀಣ ಉದ್ಯಮಗಳು ಬಲಪಡಿಸಲ್ಪಟ್ಟು ಉದ್ಯೋಗವಕಾಶಗಳು ಹೆಚ್ಚಳ

ಯೋಜನೆಯ ಮುಂದಿನ ಹಂತಗಳು:

ಈ ಯೋಜನೆಯಡಿ ಶೀಘ್ರದಲ್ಲೇ EOI (Expression of Interest) ಆಹ್ವಾನಿಸಲಾಗುವುದು. ಈ ಮೂಲಕ ಅರ್ಹ ಸಂಸ್ಥೆಗಳಿಂದ ಯೋಜನಾ ಪ್ರಸ್ತಾವನೆಗಳನ್ನು ಆಹ್ವಾನಿಸಿ, ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುವುದು. ಪ್ರಸ್ತುತದ ಯೋಜನಾ ಮಾರ್ಗಸೂಚಿಗಳ ಆಧಾರದ ಮೇಲೆ ನಿಖರವಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

WhatsApp Float Button

ಅಧ್ಯಯನದ ಪ್ರಕಾರ ಇಂತಹ ಮೂಲಸೌಕರ್ಯಗಳು ರೈತರ ಆದಾಯ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತವೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಈ ಬೃಹತ್ ಬಜೆಟ್ ಮೀಸಲಾಗಿದ್ದು, ಇದನ್ನು ಕೃಷಿ ಕ್ಷೇತ್ರದ ಬೆಳವಣಿಗೆಯ ಹೊಸ ಅಧ್ಯಾಯವೆಂದೇ ಪರಿಗಣಿಸಬಹುದು.

WhatsApp Float Button
  • ಯೋಜನೆ ಹೆಸರು: ಪ್ರಧಾನ ಮಂತ್ರಿ ಕಿಸಾನ್ ಸಂಪದ ಯೋಜನೆ (PMKSY)
  • ಅನುದಾನ ಮೊತ್ತ: ₹6,520 ಕೋಟಿ
  • ಅವಧಿ: 2021-22 ರಿಂದ 2025-26ರ ವರೆಗೆ
  • ಮುಖ್ಯ ಗುರಿಗಳು: ಆಹಾರ ಸಂಸ್ಕರಣೆ, ಮೌಲ್ಯವರ್ಧನೆ, ಉದ್ಯೋಗ ಸೃಷ್ಟಿ, ಆಹಾರ ಭದ್ರತೆ

ಈ ಯೋಜನೆಯಿಂದ ರೈತರ ಬದುಕಿಗೆ ಹೊಸ ಬೆಳಕು ಬರುವ ನಿರೀಕ್ಷೆಯಿದ್ದು, ಮಾರುಕಟ್ಟೆಯಲ್ಲಿಯೇ ಬೆಲೆ ನಿರ್ಧಾರ ಮಾಡುವ ಶಕ್ತಿಯನ್ನು ರೈತರು ಪಡೆಯುವ ದಿನ ದೂರವಿಲ್ಲ!

WhatsApp Float Button

Leave a Comment

error: Content is protected !!