PM Kisan Yojana Amount Credit Update: ಸರ್ಕಾರದಿಂದ ಮತ್ತೊಂದು ಹೊಸ ನಿಯಮ! PM ಕಿಸಾನ್ 21ನೇ ಕಂತಿನ ಹಣ ಈ ರೈತರಿಗೆ ಇಲ್ಲ! ಇಲ್ಲಿದೆ ನೋಡಿ ಮಾಹಿತಿ.
ಈಗ ಸ್ನೇಹಿತರೆ ನಮ್ಮ ದೇಶದಲ್ಲಿ ಕೃಷಿ ಕ್ಷೇತ್ರ ಉದ್ಯೋಗವಲ್ಲ ಇದು ಕೋಟಿ ಕೋಟಿ ರೈತರ ಜೀವನ ಆಧಾರವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ನಮ್ಮ ದೇಶದ ಆರ್ಥಿಕತೆಗೆ ಬಹಳ ಮುಖ್ಯ ಮತ್ತು ಆಹಾರ ಭದ್ರತೆಗೆ ಬುನಾದಿ ಹಾಗೂ ಹವಾಮಾನ ಬದಲಾವಣೆ ಮಳೆ ಕೊರತೆ, ಬೆಲೆ ಏರಿಳಿತ, ಕೀಟ ರೋಗಗಳು ಮುಂತಾದ ಅನೇಕ ಸವಾಲುಗಳಿಗೆ ನಮ್ಮ ರೈತರು ಹೋರಾಡುತ್ತಾ ಇದ್ದಾರೆ. ಈಗ ಈ ಒಂದು ಹಿನ್ನೆಲೆಯಲ್ಲಿ ಈಗ ರೈತರ ಆರ್ಥಿಕ ಸ್ಥಿರತೆಯನ್ನು ಬಲಪಡಿಸುವ ಉದ್ದೇಶ ಹಾಗೂ ಅವರ ಬದುಕಿಗೆ ಆರ್ಥಿಕ ರಕ್ಷಣೆಯನ್ನು ನೀಡುವ ಉದ್ದೇಶದಿಂದಾಗಿ ಭಾರತ ಸರಕಾರವು ಈಗಾಗಲೇ ಹಲವಾರು ರೀತಿಯ ಕಲ್ಯಾಣ ಯೋಜನೆಗಳನ್ನು ಜಾರಿಗೆ ಮಾಡಿದೆ.
ಅದರಲ್ಲಿ ಈಗ ಪ್ರಮುಖವಾದಂಥ ಯೋಜನೆ ಎಂದರೆ ಅದು ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ಯ ನಿಧಿ ಯೋಜನೆ ಈ ಒಂದು ಯೋಜನೆ ಅಡಿಯಲ್ಲಿ ಈಗ ರೈತರಿಗೆ ವರ್ಷಕ್ಕೆ ನೇರವಾಗಿ ಅವರ ಖಾತೆಗಳಿಗೆ ಸಹಾಯವನ್ನು ನೀಡಲಾಗುತ್ತದೆ. ಈಗ ಪ್ರತಿ ವರ್ಷ ಕೂಡ ಮೂರು ಕಂತುಗಳಲ್ಲಿ 6,000 ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಸರ್ಕಾರವು ನೇರವಾಗಿ ಜಮಾ ಮಾಡುತ್ತಾರೆ. ಅಷ್ಟೇ ಇಲ್ಲದೆ ಈ ಒಂದು ಯೋಜನೆಗ ಈಗಾಗಲೇ 2019 ರಲ್ಲಿ ಪ್ರಾರಂಭವಾಗಿ ಈ ಒಂದು ಯೋಜನೆ ಅಡಿಯಲ್ಲಿ ಲಕ್ಷಾಂತರ ರೈತರು ಪ್ರಯೋಜನವನ್ನು ಪಡೆದುಕೊಳ್ಳುತ್ತಾ ಇದ್ದಾರೆ.
ಅದೇ ರೀತಿಯಾಗಿ ಈಗ 20ನೇ ಕಂತು ಯಶಸ್ವಿಯಾಗಿ ಜಮಾ ಆಗಿದ್ದು. ಈಗ 21ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂದು ಎಲ್ಲ ರೈತರು ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಈ ಬಾರಿ ಸರ್ಕಾರವು ನೀಡಿರುವಂತಹ ಮಾಹಿತಿ ಪ್ರಕಾರ ಎಲ್ಲರಿಗೂ ಕೂಡ ಈ ಒಂದು ಹಣವು ದೊರೆಯುವುದಿಲ್ಲ. ಸರ್ಕಾರವು ಈಗ ಕೆಲವು ಕಠಿಣ ನಿಯಮಗಳನ್ನು ಜಾರಿಗೆ ಮಾಡಿದ್ದು. ಆ ಒಂದು ನಿಯಮಗಳನ್ನು ಉಲ್ಲಂಘಿಸಿದ ಅಥವಾ ದಾಖಲೆಗಳಲ್ಲಿ ತಪ್ಪುಗಳಿರುವಂತಹ ರೈತರಿಗೆ ಈ ಒಂದು ಹಣವು ಇನ್ನು ಮುಂದೆ ಜಮಾ ಆಗುವುದಿಲ್ಲ.
PM ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ಯಾವಾಗ!
ಈಗಾಗಲೇ ಸ್ನೇಹಿತರೆ ಇಲ್ಲಿಯವರೆಗೆ ಈ ಒಂದು ಯೋಜನೆಯ 20 ಕಂತಿನ ಹಣಗಳನ್ನು ಈಗಾಗಲೇ ರೈತರ ಖಾತೆಗಳಿಗೆ ಬಿಡುಗಡೆ ಮಾಡಲಾಗಿದೆ. ಅದೇ ರೀತಿಯಾಗಿ ಈ ಒಂದು 20ನೇ ತಂತಿನ ಹಣವನ್ನು 2025 ಆಗಸ್ಟ್ 2 ರಂದು ಬಿಡುಗಡೆ ಮಾಡಿದ್ದು.ಈಗ 9 ಕೋಟಿ ಹೆಚ್ಚು ರೈತರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿಯಾಗಿ ಈ ಒಂದು ಪಂಜಾಬ್, ಉತ್ತರಕಾಂಡ್ ಮತ್ತು ಹಿಮಾಚಲ ಪ್ರದೇಶದ ಸುಮಾರು 2.7 ಮಿಲಿಯನ್ ರೈತರಿಗೆ ಈಗಾಗಲೇ 21ನೇ ಕಂತಿನ ಹಣವನ್ನು ಮುಂಚಿತವಾಗಿ ನೀಡಲಾಗಿದೆ.
ಹಾಗೆ ಇನ್ನುಳಿದಂತಹ ರಾಜ್ಯಗಳ ರೈತರು ಇನ್ನು 21ನೇ ಕಂತಿನ ಹಣ ಯಾವಾಗ ಬರುತ್ತದೆ ಎಂದು ನಿರೀಕ್ಷೆಯಲ್ಲಿ ಇದ್ದಾರೆ. ಅದೇ ರೀತಿಯಾಗಿ ಈ ಒಂದು ಯೋಜನೆಯ ಪ್ರತಿಕಂತು ಸಾಮಾನ್ಯವಾಗಿ ನಾಲ್ಕು ತಿಂಗಳಿಗೊಮ್ಮೆ ಪ್ರತಿಯೊಬ್ಬರಿಗೆ ಬಿಡುಗಡೆಯಾಗುತ್ತದೆ. ಈ ಒಂದು ಲೆಕ್ಕಾಚಾರದ ಪ್ರಕಾರ 21ನೇ ಕಂತು 2025 ನವಂಬರ್ ತಿಂಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈಗ ಸರ್ಕಾರವು ಯಾವುದೇ ಅಧಿಕೃತ ದಿನಾಂಕವನ್ನು ಇನ್ನು ಘೋಷಣೆ ಮಾಡಿಲ್ಲ.
ಸರ್ಕಾರದ ನಿಯಮಗಳು ಏನು?
- ಈಗ ಸರ್ಕಾರ ಈ ಒಂದು ಯೋಜನೆಗೆ ಸಂಬಂಧಿಸಿದಂತೆ ಕೆಲವೊಂದು ಅಷ್ಟು ಕಠಿಣ ನಿಯಮಗಳನ್ನು ಈಗ ಬಿಡುಗಡೆ ಮಾಡಿದ್ದು. ಈ ಒಂದು ಕೆಳಗಿನ ರೈತರಿಗೆ 21ನೇ ಕಂತಿನ ಹಣ ದೊರೆಯುವುದಿಲ್ಲ.
- ಈಗ ಈ ಒಂದು ಯೋಜನೆಗೆ ತಪ್ಪಾಗಿ ಸೇರಿಕೊಂಡಿರುವವರನ್ನು ಗುರುತಿಸುವ ಸಲುವಾಗಿ ಅವರ ದಾಖಲೆಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು ಮುಂದಿನ ಎಲ್ಲಾ ಕಂತುಗಳನ್ನು ಸ್ಥಗಿತಗೊಳಿಸಲಾಗುತ್ತದೆ.
- ಹಾಗೆ EKYC ಮಾಡದೆ ಇದ್ದರೆ ಕಂತು ಪಾವತಿಯಲ್ಲಿ ತೊಂದರೆ ಉಂಟಾಗುತ್ತದೆ. ಹಾಗಾಗಿ ಸರ್ಕಾರ ಈಗ EKYC ಯನ್ನು ಕಡ್ಡಾಯಗೊಳಿಸಿದೆ.
- ಅದೇ ರೀತಿಯಾಗಿ ಈಗ ರೈತರು ಭೂಮಿಯ ದಾಖಲೆಗಳನ್ನು ಪರಿಶೀಲಿಸಿ ದೃಢೀಕರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳ್ಳದೆ ಇದ್ದರೆ ಅವರಿಗೂ ಕೂಡ ಇನ್ನು ಮುಂದೆ ಹಣವು ತಡೆಹಿಡಿಯಲಾಗುತ್ತದೆ.
- ಹಾಗೆ ತಮ್ಮ ಆಧಾರ್ ಕಾರ್ಡ್ ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡದೆ ಇದ್ದರೂ ಕೂಡ ಅವರಿಗೆ ಈ ಒಂದು ಹಣವನ್ನು ದೊರೆಯುವುದಿಲ್ಲ.
ಒಟ್ಟಾರೆಯಾಗಿ ಈಗ ರೈತರು ತಮ್ಮ ದಾಖಲೆಗಳು EKYC ಹಾಗೂ ಬ್ಯಾಂಕ್ ಲಿಂಕ್ ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಮಾಡಬೇಕಾಗುತ್ತದೆ. ಒಂದು ವೇಳೆ ಅವರು ಈ ಒಂದು ಎಲ್ಲಾ ಕೆಲಸಗಳನ್ನು ಮಾಡದೆ ಇದ್ದರೆ ಅವರಿಗೆ 21ನೇ ಕಂತಿನ ಹಣವು ಬಂದು ಜಮಾ ಆಗುವುದಿಲ್ಲ. ಆದಕಾರಣ ಪ್ರತಿಯೊಬ್ಬ ರೈತರು ಈ ಕೂಡಲೇ ಹೋಗಿ ಈ ಒಂದು ಯೋಜನೆಗೆ ಸಂಬಂಧಪಟ್ಟಂತಹ ಎಲ್ಲಾ ದಾಖಲೆಗಳನ್ನು ಸರಿಪಡಿಸಿಕೊಳ್ಳಬಹುದು.