PM Dhan-Dhanya Krishi Yojana: ರೈತರಿಗೆ ಹೊಸ ಭರವಸೆ!
ಭಾರತದ ಕೃಷಿ ಕ್ಷೇತ್ರದ ಪರಿಕಲ್ಪನೆಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆ – ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ (PM Dhan-Dhanya Krishi Yojana) ಈಗ ಅಧಿಕೃತವಾಗಿ ಚಾಲನೆ ಪಡೆಯುತ್ತಿದೆ. ರೈತರ ಆದಾಯ ಹೆಚ್ಚಳ, ಕೃಷಿ ಉತ್ಪಾದಕತೆ ಸುಧಾರಣೆ ಮತ್ತು ಸಂಪೂರ್ಣ ಕೃಷಿ ಚಕ್ರದ ಬೆಂಬಲವನ್ನು ಈ ಯೋಜನೆಯು ಗುರಿಯಾಗಿಟ್ಟುಕೊಂಡಿದೆ.
ಯೋಜನೆಯ ಉದ್ದೇಶವೇನು?
ಈ ಯೋಜನೆಯ ಮುಖ್ಯ ಉದ್ದೇಶ “ಸಮಗ್ರ ಕೃಷಿ ಅಭಿವೃದ್ಧಿ” ಎಂಬುದಾಗಿದೆ. ಇಂದಿನ ರೈತನು ಫಸಲನ್ನು ಬೆಳೆಸಿದ ನಂತರ ಸುಲಭವಾಗಿ ಅದರ ಮಾರುಕಟ್ಟೆ ವ್ಯವಸ್ಥೆ, ನಿರ್ವಹಣೆ, ನೀರಾವರಿ, ಕೃಷಿ ಸಾಲ ಮತ್ತು ತಂತ್ರಜ್ಞಾನವನ್ನೂ ಬಳಸಿಕೊಂಡು ಆರ್ಥಿಕ ಸುಸ್ಥಿತಿಗೆ ತಲುಪಬೇಕೆಂಬದು ಇದರ ಆಶಯ.
ಪ್ರಮುಖ ಅಂಶಗಳು
- 100 ಕೃಷಿ ಪ್ರಮುಖ ಜಿಲ್ಲೆಗಳಿಗೆ ಯೋಜನೆಯ ಪೈಲಟ್ ಜಾರಿಗೆ ಚಾಲನೆ.
- 7 ಕೋಟಿ ರೈತರಿಗೆ ನೇರ ಲಾಭ ದೊರೆಯುವ ನಿರೀಕ್ಷೆ.
- ₹24,000 ಕೋಟಿ ರೂ. ಬಜೆಟ್ ನೀಡಲಾಗಿದೆ.
- ಯೋಜನೆಯ ಅವಧಿ: 2025-26ರಿಂದ ಮುಂದಿನ 6 ವರ್ಷಗಳವರೆಗೆ.
- 11 ಕೇಂದ್ರ ಸಚಿವಾಲಯಗಳು ಮತ್ತು 36 ವಿವಿಧ ಯೋಜನೆಗಳ ಸಹಭಾಗಿತ್ವ.
- ಪ್ರತಿ ರಾಜ್ಯದಿಂದ ಕನಿಷ್ಠ ಒಂದು ಜಿಲ್ಲೆ ಆಯ್ಕೆ ಮಾಡಲಾಗುತ್ತದೆ.
ಯೋಜನೆಯ ಪ್ರಮುಖ ಕಾಳಜಿ ಕ್ಷೇತ್ರಗಳು
- ಕಡಿಮೆಯಾದ ಕೃಷಿ ಉತ್ಪಾದಕತೆ ಇರುವ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ.
- ಸಾಲ ಲಭ್ಯತೆ ಕಡಿಮೆಯಿರುವ ಪ್ರದೇಶಗಳಿಗೆ ವಿಶೇಷ ನೆರವು.
- ಸಾಧ್ಯವಾದಷ್ಟು ನೀರಾವರಿ, ಕೊಯ್ಲು ನಂತರದ ಸಂಸ್ಕರಣೆ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಅಭಿವೃದ್ಧಿ.
- ಸತತ ಕೃಷಿ (Sustainable Farming) ಹಾಗೂ ಬೆಳೆ ವೈವಿಧ್ಯತೆ (Crop Diversification) ಗುರಿಯಾಗಿರಲಿದೆ.
ಯಾಕೆ ಇದು ವಿಶೇಷ?
ಈ ಯೋಜನೆಯು ಕೇವಲ ಬೆಳೆ ಬೆಳೆಯುವ ಕ್ರಮವಲ್ಲ, ಅದು ಸಮಗ್ರ ಕೃಷಿ ಸರಪಳಿ ಅಭಿವೃದ್ಧಿಗೆ ನಾಂದಿ ಹಾಡುತ್ತದೆ. ಬೆಳೆ ನೆಡುವ ಹಂತದಿಂದ ಹಿಡಿದು ಕೊಯ್ಯುವವರೆಗೆ, ಮತ್ತು ನಂತರದ ಸಂಸ್ಕರಣೆ, ಪ್ಯಾಕಿಂಗ್, ಮಾರಾಟದವರೆಗೆ ರೈತರಿಗೆ ನೆರವಾಗುವ ವ್ಯವಸ್ಥೆಗಳನ್ನು ಒದಗಿಸಲಿದೆ.
ಇದನ್ನು ಓದಿ : Government Subsidy: ಜೇನು ಸಾಕಾಣಿಕೆಗೆ ಭಾರೀ ಸಹಾಯಧನ – ಹೊಸ ಉದ್ಯಮ ಅವಕಾಶ!
ಅಸ್ಪಿರೇಷನಲ್ ಡಿಸ್ಟ್ರಿಕ್ಟ್ ಪ್ರೋಗ್ರಾಂ ಮಾದರಿಯ ಆಧಾರದ ಮೇಲೆ ಈ ಯೋಜನೆಯು ರೂಪುಗೊಂಡಿದ್ದು, ಇದು ಸ್ಥಳೀಯ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಜಾರಿಯಾಗಲಿದೆ.
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳುವಂತೆ, “ಈ ಯೋಜನೆಯು ರೈತರ ಆದಾಯದ ದೀರ್ಘಕಾಲಿಕ ಶಾಶ್ವತ ಏಳಿಗೆಗೆ ನೆರವಾಗಲಿದೆ. ಇದು ನಮ್ಮ ಕೃಷಿ ವ್ಯವಸ್ಥೆಯ ನೆಲೆ ಬದ್ಲಾಯಿಸುವಂತಹ ಮಹತ್ವದ ಹೆಜ್ಜೆಯಾಗಿದೆ.”
ಧನ್-ಧಾನ್ಯ ಕೃಷಿ ಯೋಜನೆ ಎಂದರೆ ಕೇವಲ ಮತ್ತೊಂದು ಸಬ್ಸಿಡಿ ಯೋಜನೆ ಅಲ್ಲ. ಇದು ಭಾರತೀಯ ರೈತನ ಬದುಕು ಮತ್ತು ಕೃಷಿಯ ಪ್ರಗತಿಗೆ ಹೆಜ್ಜೆ ಹಾಕುವ, ವೈಜ್ಞಾನಿಕ ಹಾಗೂ ಆಧುನಿಕ ದೃಷ್ಠಿಕೋನವನ್ನು ಒಳಗೊಂಡಿರುವ ಹೆಮ್ಮೆಯ ಯೋಜನೆ.
ಇದನ್ನು ಓದಿ : PM Kisan Amount Update: PM ಕಿಸಾನ್ ಯೋಜನೆಯ 20ನೇ ಕಂತನೆ ಹಣ ಬಿಡುಗಡೆಗೆ ದಿನಾಂಕ ಫಿಕ್ಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಕೃಷಿಕ ಗೆಳೆಯರೇ, ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆಯಲು ನಿಮ್ಮ ಜಿಲ್ಲೆಯ ಕೃಷಿ ಇಲಾಖೆಯ ಸಂಪರ್ಕದಲ್ಲಿರಿ. ಇದರ ಸಂಪೂರ್ಣ ವಿವರಗಳು ಹಾಗೂ ಅರ್ಜಿ ಪ್ರಕ್ರಿಯೆ ಮುಂದಿನ ತಿಂಗಳುಗಳಲ್ಲಿ ಹಂಚಿಕೊಳ್ಳಲಾಗುತ್ತದೆ.