Mini Tractor Subsidy Scheme: ರೈತರಿಗೆ ಸಿಹಿ ಸುದ್ದಿ ಮಿನಿ ಟ್ಯಾಕ್ಟರ್ ಖರೀದಿ ಮಾಡಲು ಸರ್ಕಾರದಿಂದ ಸಬ್ಸಿಡಿ ಗೆ ಅರ್ಜಿ ಪುನರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ಕರ್ನಾಟಕ ತೋಟಗಾರಿಕೆ ಇಲಾಖೆ ವತಿಯಿಂದ ಈಗ ಈ ಒಂದು 2025 26 ನೇ ಸಾಲಿನಲ್ಲಿ ಈಗ ಮಿನಿ ಟ್ರ್ಯಾಕ್ಟರ್, ಹನಿ ನೀರಾವರಿ ಘಟಕಗಳು ಸೇರಿದಂತೆ ಈಗ ಹಲವಾರು ಘಟಕಗಳಿಗೆ ಈಗ ಸಬ್ಸಿಡಿಯನ್ನು ನೀಡಲು ರೈತರಿಂದ ಅರ್ಜಿಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಹಾಗಿದ್ದರೆ ಈ ಒಂದು ಯೋಜನೆಗಳಿಗೆ ನೀವು ಕೂಡ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕೆಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಈಗ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ಈಗ ಅನುಷ್ಠಾನಗೊಳ್ಳುತ್ತಿದ್ದು. ಈಗ ರೈತರಿಗೆ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದ ಈ ಒಂದು ಯೋಜನೆಗಳನ್ನು ಜಾರಿಗೆ ಮಾಡಲಾಗಿದೆ.
ಈ ಯೋಜನೆಯ ಉದ್ದೇಶ ಮತ್ತು ಪ್ರಯೋಜನಗಳು ಏನು?
ಈಗ ಈ ಒಂದು ಯೋಜನೆಗಳ ಅಡಿಯಲ್ಲಿ ತೋಟಗಾರಿಕೆಯ ವಿಸ್ತರಣೆ, ಕೃಷಿ ಸಾಧನಗಳ ಬಳಕೆ ಹಾಗು ತರಕಾರಿಗಳ ಬೆಳೆಯ ಅಭಿವೃದ್ಧಿ, ಶೇಖರಣ ಘಟಕಗಳ ಸ್ಥಾಪನೆ ಹಾಗೂ ನೀರಾವರಿ ವ್ಯವಸ್ಥೆಯ ಸುಧಾರಣೆ ಮುಂತಾದವುಗಳನ್ನು ಉತ್ತೇಜನ ನೀಡಲು ಈ ಒಂದು ಯೋಜನೆಯನ್ನು ಜಾರಿಗೆ ಮಾಡಲಾಗಿದೆ.
ಅದೇ ರೀತಿಯಾಗಿ ಈ ಒಂದು ಯೋಜನೆ ಮೂಲಕ ಕೃಷಿ ಉತ್ಪಾದನೆಯಲ್ಲಿನ ಪರಿಣಾಮಕಾರಿ ಬದಲಾವಣೆಗಳು ಹಾಗೂ ಕೃಷಿ ಆದಾಯದ ಹೆಚ್ಚಳ ಮತ್ತು ಶಾಶ್ವತ ಕೃಷಿ ಸಾಧನೆ ಹಾಗೂ ನೀರಿನ ಸಮರ್ಪಕ ಬಳಕೆಗಳು ಸಾಧ್ಯವಾಗುವ ಉದ್ದೇಶದಿಂದ ಈ ಒಂದು ಯೋಜನೆಗಳನ್ನು ಜಾರಿಗೆ ಮಾಡಲಾಗಿದೆ.
ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಬಹುದು
- ಈಗ ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕಾಗುತ್ತದೆ.
- ಅದೇ ರೀತಿಯಾಗಿ ಆ ಒಂದು ರೈತರು ಹೆಸರಿನಲ್ಲಿ ಸ್ವಂತ ಜಮೀನು ಇರಬೇಕಾಗುತ್ತದೆ.
- ಆನಂತರ ಸಣ್ಣ ಮತ್ತು ಅತಿ ಸಣ್ಣ ರೈತರು ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಆಗಿರಬೇಕು.
- ಹಾಗೆ ಆ ಒಂದು ಜಮೀನಿಗೆ ನೀರಾವರಿ ಮೂಲ ಇರುವುದು ಅಗತ್ಯವಾಗಿರುತ್ತದೆ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆಯವರ
- ಇತ್ತೀಚಿನ ಭಾವಚಿತ್ರ
- ಜಮೀನಿನ ಪಹಣಿಗಳು
- ರೇಷನ್ ಕಾರ್ಡ್
- ನೀರಾವರಿ ಮೂಲದ ಪ್ರಮಾಣ ಪತ್ರಗಳು
- ಬೆಳೆಯ ದೃಢೀಕರಣ ಪತ್ರ
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ರೈತರು ತಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿಯನ್ನು ನೀಡಿ. ಅಲ್ಲಿ ನೀವು ಈ ಒಂದು ಯೋಜನೆಗೆ ಸಂಬಂಧಪಟ್ಟಂತಹ ಅರ್ಜಿ ನಮೂನೆಯನ್ನು ತೆಗೆದುಕೊಂಡು ಅದಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.