Jeevajala Scheme:- ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್‌ವೆಲ್ ಸಬ್ಸಿಡಿ!

Jeevajala Scheme:- ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್‌ವೆಲ್ ಸಬ್ಸಿಡಿ!

ಜೀವಜಲ ಯೋಜನೆ 2025–26: ವೀರಶೈವ-ಲಿಂಗಾಯತ ರೈತರಿಗೆ ₹4 ಲಕ್ಷದವರೆಗೆ ಉಚಿತ ಬೋರ್‌ವೆಲ್ ಸಬ್ಸಿಡಿ! ಕರ್ನಾಟಕ ಸರ್ಕಾರದ ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವು 2025-26ನೇ ಸಾಲಿಗೆ ರೈತರಿಗೆ ಬೋರ್‌ವೆಲ್ ಕೊರೆಯಲು ಆರ್ಥಿಕ ಸಹಾಯ ನೀಡುವ ಜೀವಜಲ ಯೋಜನೆ ಘೋಷಿಸಿದೆ. ಈ ಯೋಜನೆಯಡಿ ವೀರಶೈವ-ಲಿಂಗಾಯತ (3B ವರ್ಗ) ಸಮುದಾಯದ ಸಣ್ಣ ರೈತರಿಗೆ ಉಚಿತ ಬೋರ್‌ವೆಲ್ ಕೊರೆಯಲು ₹4,75,000 ವರೆಗೆ ನೆರವು ಒದಗಿಸಲಾಗುತ್ತದೆ.

WhatsApp Float Button

Jeevajala Scheme

WhatsApp Float Button

ಇದೊಂದು ರೈತಮುಖಿ ಯೋಜನೆಯಾಗಿದ್ದು, ನೀರಾವರಿ ಲಭ್ಯತೆಯ ಕೊರತೆಯಿಂದ ಬಳಲುತ್ತಿರುವ ರೈತರ ಪರಿಷ್ಠಿತಿಯನ್ನು ಸುಧಾರಿಸಲು ಮುಖ್ಯ ಉದ್ದೇಶ ಹೊಂದಿದೆ. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ: ಜೂನ್ 30, 2025.

WhatsApp Float Button

ಸಬ್ಸಿಡಿ ವಿವರ

ಜಿಲ್ಲೆಗಳು ಒಟ್ಟು ವೆಚ್ಚ (₹) ಬೋರ್‌ವೆಲ್ + ಪಂಪ್ ಸೆಟ್ (₹) ವಿದ್ಯುತ್ ಸಂಪರ್ಕ (₹) ಶೇ.4 ಬಡ್ಡಿದರ ಸಾಲ (₹)
ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ₹4,75,000 ₹3,50,000 ₹75,000 ₹50,000
ಇತರೆ 25 ಜಿಲ್ಲೆಗಳು ₹3,75,000 ₹2,50,000 ₹75,000 ₹50,000

 

WhatsApp Float Button

ಅರ್ಹತೇ ಏನು?

  • ವೀರಶೈವ-ಲಿಂಗಾಯತ (3B ವರ್ಗ) ಸಮುದಾಯದ ಸದಸ್ಯರಾಗಿರಬೇಕು.
  • ಗ್ರಾಮೀಣ ಪ್ರದೇಶ: ವಾರ್ಷಿಕ ಆದಾಯ ₹98,000 ಒಳಗಿರಬೇಕು.
  • ಪಟ್ಟಣ ಪ್ರದೇಶ: ವಾರ್ಷಿಕ ಆದಾಯ ₹1,20,000 ಒಳಗಿರಬೇಕು.
  • 18ರಿಂದ 60 ವರ್ಷದೊಳಗಿನ ರೈತರು ಅರ್ಹರು.
  • ಕನಿಷ್ಠ ಜಮೀನು ಹೊಂದಿರುವುದು ಕಡ್ಡಾಯ:
    • ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ: ಕನಿಷ್ಟ 1 ಎಕರೆ
    • ಇತರೆ ಜಿಲ್ಲೆಗಳು: ಕನಿಷ್ಠ 2 ಎಕರೆ – ಗರಿಷ್ಠ 5 ಎಕರೆ
  • ಫ್ರೂಟ್ಸ್ (FRUITS ID) ಹೊಂದಿರಬೇಕು.
  • ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸೌಲಭ್ಯ ಲಭ್ಯ.

ಅರ್ಜಿ ಸಲ್ಲಿಕೆಗೆ ಅಗತ್ಯವಿರುವ ದಾಖಲೆಗಳು

  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಜಾತಿ ಮತ್ತು ಆದಾಯ ಪ್ರಮಾಣಪತ್ರ (ಫಾರ್ಮ್-ಎಫ್)
  • ಸಣ್ಣ/ಅತಿ ಸಣ್ಣ ರೈತ ಪ್ರಮಾಣಪತ್ರ
  • ಜಮೀನಿನ ಹಕ್ಕುಪತ್ರಗಳು (ಪಹಣಿ, ಮ್ಯೂಟೇಷನ್, ತೆರಿಗೆ ರಶೀದಿ)
  • ಫ್ರೂಟ್ಸ್ ಐಡಿ ಪ್ರಮಾಣಪತ್ರ
  • ಪಡಿತರ ಚೀಟಿ
  • ಶಾಶ್ವತ ನಿವಾಸ ಪ್ರಮಾಣಪತ್ರ
  • ವಂಶವೃಕ್ಷ (ನೋಟರೈಸ್ಡ್)
  • ಆಧಾರ್ ಕಾರ್ಡ್

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಕೆಳಗಿನ ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು

WhatsApp Float Button

 ಆನ್ಲೈನ್ ಮೂಲಕ

  1. ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡಿ.
  2. ಹೊಸ ಬಳಕೆದಾರರಾಗಿ ನೋಂದಣಿ ಮಾಡಿ.
  3. OTP ಮೂಲಕ ಲಾಗಿನ್ ಮಾಡಿ.
  4. “ಜೀವಜಲ ಯೋಜನೆ” ಅರ್ಜಿ ಫಾರ್ಮ್ ಆಯ್ಕೆ ಮಾಡಿ.
  5. ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ.
  6. ಕೊನೆಗೆ Submit ಮಾಡಿ.

ಆಫ್ಲೈನ್ / ಸಹಾಯ ಕೇಂದ್ರ

  • ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ.

ಯೋಜನೆ ವಿವರಗಳು ಮತ್ತು ಅಪ್‌ಡೇಟ್‌ಗಾಗಿ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ:
 https://kvldcl.karnataka.gov.in/events/kn

WhatsApp Float Button

ಜೀವಜಲ ಯೋಜನೆ ವೀರಶೈವ-ಲಿಂಗಾಯತ ಸಮುದಾಯದ ಸಣ್ಣ ರೈತರಿಗೆ ಅತ್ಯುತ್ತಮ ಅವಕಾಶ. ನೀರಾವರಿ ಸೌಲಭ್ಯವನ್ನು ವಿಸ್ತರಿಸಲು ಈ ಯೋಜನೆಯಿಂದ ಬೋರ್‌ವೆಲ್ ಸಬ್ಸಿಡಿ ಪಡೆದು ನಿಮ್ಮ ಕೃಷಿಯ ಬೆಳೆಣೆಗೆ ಪುಷ್ಠಿ ನೀಡಿಕೊಳ್ಳಿ. ಅರ್ಜಿ ಸಲ್ಲಿಕೆಗೆ ತಡವಾಗದೇ ಈಗಲೇ ನಿಮ್ಮ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿ ಸಲ್ಲಿಸಿ!

WhatsApp Float Button

 

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!