Gruhalakshmi Yojane Pending Amount Credit To Dipavali Special Good News For Womans: ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ ಹಣ ಯಾವಾಗ ಬಿಡುಗಡೆ! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಇದೊಂದು ಪ್ರಮುಖ ಹೆಜ್ಜೆ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಈ ಒಂದು ಯೋಜನೆ ಅಡಿಯಲ್ಲಿ ಪಡಿತರ ಚೀಟಿಯ ಮುಖ್ಯ ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಆರ್ಥಿಕವಾಗಿ ನೆರವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಈಗಾಗಲೇ ಜಮಾ ಮಾಡಲಾಗುತ್ತದೆ.

ಅದರಂತೆ ಈಗ ಕಳೆದ ಕೆಲವು ತಿಂಗಳಿಂದ ಕಂತುಗಳ ವಿಳಂಬದಿಂದಾಗಿ ಫಲಾನುಭವಿಗಳಲ್ಲಿ ಅಸಮಾಧಾನ ಉಂಟಾಗಿದ್ದು. ಈಗ ಸರ್ಕಾರವು ನೀಡಿರುವಂತೆ ಮಾಹಿತಿ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈಗ ಬಾಕಿ ಉಳಿದ ಹಣವನ್ನು ಬಿಡುಗಡೆ ಮಾಡಲು ಯೋಜನೆಯನ್ನು ಮಾಡಿದ್ದು. ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ಮಹಿಳೆ ಖಾತೆಗಳಿಗೆ ಈ ಒಂದು ಹಣವು ಬಂದು ಜಮಾ ಆಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಮಾಹಿತಿ
ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ನಮ್ಮ ರಾಜ್ಯ ಸರ್ಕಾರ ನೀಡಿರುವಂತಹ ಖಾತರಿ ಯೋಜನೆಗಳಲ್ಲಿ ಒಂದಾಗಿದೆ. ಈಗ ಈ ಒಂದು ಯೋಜನೆಯು ಕುಟುಂಬದ ಆರ್ಥಿಕ ಜವಾಬ್ದಾರಿಯನ್ನು ಹೊರುವಂತಹ ಮಹಿಳೆಯರಿಗೆ ಸ್ವಾವಲಂಬನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಒಟ್ಟಾರೆಯಾಗಿ ಈ ಒಂದು ಯೋಜನೆ ಮೂಲಕ ಈಗ ಇಲ್ಲಿಯವರೆಗೆ ಸುಮಾರು 22 ಕಂತುಗಳು ಅಂದರೆ ಸುಮಾರು 42,000 ಹಣವನ್ನು ಈಗ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗಿದೆ.
ಈಗಾಗಲೇ ಫಲಾನುಭವಿಗಳು ಈ ಒಂದು ಹಣವನ್ನು ಬಳಕೆ ಮಾಡಿಕೊಂಡು ಅನೇಕ ಮಹಿಳೆಯರು ಸಣ್ಣ ವ್ಯಾಪಾರ ಕೃಷಿ ಅಥವಾ ಇತರ ಆದಾಯದ ಮೂಲಗಳನ್ನು ಈಗ ಸೃಷ್ಟಿ ಮಾಡಿಕೊಂಡು ತಮ್ಮ ಜೀವನ ಮಟ್ಟವನ್ನು ಮುಂದಕ್ಕೆ ನಡೆಸಿಕೊಂಡು ಹೋಗುತ್ತಾ ಇದ್ದಾರೆ.
ಪೆಂಡಿಂಗ ಹಣ ಯಾವಾಗ ಬಿಡುಗಡೆ!
ಈಗ ಈ ಒಂದು ಕಳೆದ 5 ಮತ್ತು 6 ತಿಂಗಳಿಂದ ಕಂತುಗಳು ಸರಿಯಾದ ಸಮಯಕ್ಕೆ ಜಮಾ ಆಗದೆ ಇರುವುದರಿಂದ ಫಲಾನುಭವಿಗಳಲಿ ಈಗಾಗಲೇ ಆತಂಕ ಉಂಟಾಗಿತ್ತು. ಆದರೆ ಈಗ ದೀಪಾವಳಿಯ ಸಂದರ್ಭವನ್ನು ಸರ್ಕಾರವು ಗಮನದಲ್ಲಿಟ್ಟುಕೊಂಡು ಸರ್ಕಾರವು ಬಾಕಿ ಉಳಿದ ಕಂತುಗಳನ್ನು ಈಗ ಶೀಘ್ರವಾಗಿ ಮಹಿಳೆಯರ ಖಾತೆಗಳಿಗೆ ಜಮಾ ಆಗುವ ಪ್ರಕ್ರಿಯೆ ಅನ್ನು ಈಗ ಕೈಗೊಂಡಿದೆ.
ಈಗ ಜುಲೈ ಮತ್ತು ಆಗಸ್ಟ್ ಕಂತುಗಳು ಒಟ್ಟಾರೆಯಾಗಿ 4000 ಹಣವು ದೀಪಾವಳಿಯ ಒಂದು ವಾರದ ಒಳಗಾಗಿ ಅಂದರೆ 7 ರಿಂದ 10 ದಿನಗಳಲ್ಲಿ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಲಿದೆ.
ಹಾಗೆ ಈಗ ಸೆಪ್ಟೆಂಬರ್ ತಿಂಗಳಿನ ಹಣವನ್ನು ಅಂದರೆ 2000 ಹಣವನ್ನು ಅಕ್ಟೋಬರ್ ಕೊನೆಯ ವಾರದಲ್ಲಿ ಅಥವಾ ನವೆಂಬರ್ ಆರಂಭದಲ್ಲಿ ಪ್ರತಿಯೊಬ್ಬರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಅದೇ ರೀತಿ ಈಗ ಫಲಾನುಭವಿಗಳಿಗೆ ಹಬ್ಬದ ಸಂದರ್ಭದಲ್ಲಿ ಆರ್ಥಿಕ ಸಹಾಯವನ್ನು ಒದಗಿಸಲು ಈ ಒಂದು ಹಣವನ್ನು ಈಗ ಜಮಾ ಮಾಡಲಾಗುತ್ತದೆ ಎಂದು ಹೇಗೆ ಸರ್ಕಾರವು ಮಾಹಿತಿಯನ್ನು ನೀಡಿದೆ.
ಹಣದ ವಿಳಂಬಕ್ಕೆ ಕಾರಣಗಳು ಏನು?
- ಈಗ ಫಲಾನುಭವಿಗಳ ಖಾತೆಗಳಲ್ಲಿ ಯಾವುದೇ ರೀತಿಯಾದಂತಹ ಚಟುವಟಿಕೆ ಇಲ್ಲದಿರುವುದು.
- ಆನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು.
- ಹಾಗೆಯೇ ಮುಖ್ಯಸ್ಥರ ಅಂದರೆ ಪಡಿತರ ಚೀಟಿಯಲ್ಲಿ ಮುಖ್ಯಸ್ಥರ ಬದಲಾವಣೆಯಾಗುವುದು.
- ಹಾಗೆಯೇ ಜಿಎಸ್‌ಟಿ ಅಥವಾ ಆದಾಯ ತೆರಿಗೆ ಪಾವತಿಸುವವರ ಫಲಾನುಭವಿಗಳು ಹಣ ಜಮಾ ಆಗದಿರಬಹುದು..
ಈಗ ನಾವು ಈ ಒಂದು ಮೇಲೆ ತಿಳಿಸಿರುವ ಸಮಸ್ಯೆಗಳನ್ನು ಈಗ ಸರಿಪಡಿಸಲು ಫಲಾನುಭವಿಗಳು ಸ್ಥಳೀಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಈಗ ಸಂಪರ್ಕಿಸಿ ಅಥವಾ ಸೇವಾ ಸಿಂಧು ಪೋರ್ಟಲ್ ನ ಮೂಲಕ ಈಗ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಹಣವನ್ನು ಚೆಕ್ ಮಾಡುವುದು ಹೇಗೆ?
- ಮೊದಲೇ ನೀವು ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ DBT ಕರ್ನಾಟಕ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.
- ಆನಂತರ ನೀವು ನಿಮ್ಮ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ ಲಾಗಿನ್ ಆಗಿ.
- ಆನಂತರ ನೀವು ಗೃಹಲಕ್ಷ್ಮಿ ಯೋಜನೆಯ ವಿವರಗಳನ್ನು ಅದರಲ್ಲಿ ಸಂಪೂರ್ಣ ಮಾಹಿತಿ ಪಡೆಯಬಹುದು.