Gruhalakshmi Yojana Update: ಗೃಹಲಕ್ಷ್ಮಿ ಯೋಜನೆ ಮತ್ತೊಂದು ಹೊಸ ಅಪ್ಡೇಟ್! ಮೇ 20ರ ನಂತರ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Yojana Update: ಗೃಹಲಕ್ಷ್ಮಿ ಯೋಜನೆ ಮತ್ತೊಂದು ಹೊಸ ಅಪ್ಡೇಟ್! ಮೇ 20ರ ನಂತರ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.

ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿರುವಂತಹ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗ ಈ ಗೃಹಲಕ್ಷ್ಮಿ ಯೋಜನೆ ಕೂಡ ಒಂದು ದೊಡ್ಡ ಯೋಜನೆ ಎಂದರೆ ತಪ್ಪಾಗದು. ಈಗ ಈ ಒಂದು ಯೋಜನೆಯ ಮೂಲಕ ಸರ್ಕಾರವು ಮಹಿಳೆಯರಿಗೆ ಪ್ರತಿ ತಿಂಗಳು 2000 ಹಣವನ್ನು ಅವರ ಖಾತೆಗಳಿಗೆ ನೇರವಾಗಿ ಜಮಾ ಮಾಡುತ್ತಾ ಇತ್ತು. ಹಾಗಿದ್ದರೆ ಈ ಒಂದು ಯೋಜನೆಗೆ ಸಂಬಂಧಪಟ್ಟಂತೆ ಈಗ ಸರ್ಕಾರವನ್ನು ನೀಡಿರುವ ಅಪ್ಡೇಟ್ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಒಂದು ಲೇಖನದ ಮೂಲಕ ತಿಳಿಯೋಣ ಬನ್ನಿ.

WhatsApp Float Button

Gruhalakshmi Yojana Update

ಹಾಗೆಯೆ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಮೂರು ತಿಂಗಳಿನಿಂದ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ಫಲಾನುಭವಿಗಳು ಅಂದರೆ ಮಹಿಳೆಯರ ಖಾತೆಗಳಿಗೆ ಈಗಾಗಲೇ ಜಮಾ ಆಗದೆ ಇರುವುದರ ಕಾರಣ ಹಲವಾರು ಕಡೆ ಈಗ ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈಗ ತುಮಕೂರು, ಮಂಡ್ಯ, ಧಾರವಾಡ, ಗದಗ, ದಾವಣಗೆರೆ ಸೇರಿದಂತೆ ಇನ್ನು ಹಲವಾರು ಜಿಲ್ಲೆಗಳಲ್ಲಿ ಈಗ ಮಹಿಳೆಯರು ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ಈಗ ಸ್ನೇಹಿತರೇ ಇದು ಹೊಸ ಸಮಸ್ಯೆ ಏನು ಅಲ್ಲ ಕಳೆದ ಆರು ತಿಂಗಳಿನಿಂದ  ಕೂಡ ಗೃಹಲಕ್ಷ್ಮಿ ಯೋಜನೆ ಹಣ ತಡವಾಗಿ ಅಥವಾ ತಿಂಗಳಿಗೆ ಸರಿಯಾದ ರೀತಿಯಲ್ಲಿ ಜಮಾ ಆಗಿಲ್ಲ. ಅದೇ ರೀತಿಯಾಗಿ ಈಗ ಸರ್ಕಾರ ಉಳಿಯುವುದು ತಾಂತ್ರಿಕ ಸಮಸ್ಯೆ ನೆಪದಲ್ಲಿ ಈ ಈ ದಿನ ಬಿಡುಗಡೆ ಆಗುತ್ತದೆ ಮುಂದಿನ ದಿನಗಳಲ್ಲಿ ಬಿಡುಗಡೆಯಾಗುತ್ತದೆ ಎಂಬ ಮಾಹಿತಿಯನ್ನು ನೀಡುತ್ತಾ ಬಂದಿದೆ. ಅದೇ ರೀತಿಯಾಗಿ ಈಗ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಮಹಿಳೆಯರ ಖಾತೆಗಳಿಗೆ ಜಮಾ ಆಗದೇ ಇರುವುದರ ಕಾರಣ ಈಗ ಹಲವಾರು ಕಡೆ ಮಹಿಳೆಯರು ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಇದ್ದಾರೆ.

ಮೂರು ಕಂತಿನ ಹಣ ಒಟ್ಟಿಗೆ ಜಮಾ

ಈಗ ಈ ಒಂದು ಯೋಜನೆಯ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರದ ಮಹತ್ವ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿದಂತ ಪ್ರತಿಯೊಬ್ಬ ಕುಟುಂಬದ ಮಹಿಳೆಯರಿಗೂ ಕೂಡ ನಗದು ಸಹಾಯವನ್ನು ನೀಡಲಾಗುತ್ತದೆ ಅಂದರೆ ಪ್ರತಿ ತಿಂಗಳು 2000 ಹಣವನ್ನು ನೀಡಲಾಗುತ್ತದೆ.

ಹಾಗೆ ಈಗ ಈ ಒಂದು ಯೋಜನೆ ಅನ್ನು ಪ್ರಾರಂಭ ಮಾಡಿ ಎರಡು ವರ್ಷವನ್ನು ಪೂರೈಸಲಿದೆ. ಅಷ್ಟೇ ಅಲ್ದೆ ಈ ಹಿನ್ನೆಲೆಯಲ್ಲಿ ಈಗ ಬಾಕಿ ಉಳಿದಿರುವಂತಹ ಪ್ರತಿಯೊಂದು ಕಂತಿನ ಹಣವನ್ನು ಮಹಿಳೆಯರ ಖಾತೆಗಳಿಗೆ ವರ್ಗಾವಣೆ ಮಾಡಲು ಈಗ ಸರ್ಕಾರವನ್ನು ತೀರ್ಮಾನವನ್ನು ತೆಗೆದುಕೊಂಡಿದೆ ಎಂದು ಮಾಹಿತಿಯನ್ನು ನೀಡಲಾಗಿತ್ತು.

ಅದೇ ರೀತಿಯಾಗಿ ಈಗಾಗಲೇ ಸರ್ಕಾರವು ನೀಡಿರುವಂತಹ ಮಾಹಿತಿಯ ಪ್ರಕಾರ ಈ ಹಿಂದೆ ಮೇ ಮೊದಲನೆ ವಾರದಲ್ಲಿ ಅಥವಾ ಎರಡನೇ ವಾರದಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವನ್ನು ತಪ್ಪದೆ ಪ್ರತಿಯೊಬ್ಬ ಮಹಿಳಾ ಖಾತೆಗಳಿಗೂ ಕೂಡ ಜಮಾ ಮಾಡುತ್ತೇವೆ ಎಂಬ ಮಾಹಿತಿಯನ್ನು ನೀಡಿದ್ದರು. ಆದರೆ ಈಗ ಮೇ ತಿಂಗಳ ಎರಡು ವಾರಗಳು ಮುಗಿದರೂ ಕೂಡ ಇನ್ನೂ ಈ ಒಂದು ಯೋಜನೆ ಹಣ ಈಗ ಮಹಿಳೆಯರ ಖಾತೆಗಳಿಗೆ ಜಮಾ ಆಗಿಲ್ಲ.

ಮೇ 20 ನಂತರ ಗೃಹಲಕ್ಷ್ಮಿ ಹಣ ಜಮಾ

ಈಗ ಸ್ನೇಹಿತರೆ ರಾಜ್ಯ ಸರ್ಕಾರವು ಆಡಳಿತಕ್ಕೆ ಬಂದು ಈಗ ಎರಡು ವರ್ಷವನ್ನು ಪೂರೈಸಿದೆ. ಅಷ್ಟೇ ಅಲ್ಲದೆ ಈ ಒಂದು ಹಿನ್ನೆಲೆಯಲ್ಲಿ ಈಗ ಮೇ 20ರಂದು ವಿಜಯಪುರ ಜಿಲ್ಲೆಯಲ್ಲಿ ಈಗ ಈ ಒಂದು ಎರಡು ವರ್ಷದ ಗ್ಯಾರಂಟಿ ಬದುಕು ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಈಗ ಸರ್ಕಾರವು ಇಟ್ಟುಕೊಂಡಿದೆ.ಈ ಒಂದು ಯೋಜನೆಯ ಸಂಬಂಧಪಟ್ಟಂತೆ ಈಗ ಆ ಒಂದು ಕಾರ್ಯಕ್ರಮಗಳಲ್ಲಿ ಸರ್ಕಾರವು ಮಾಹಿತಿಯನ್ನು ನೀಡುವ ಸಾಧ್ಯತೆ ಇದೆ.

ಈ ಒಂದು ಗೃಹಲಕ್ಷ್ಮಿ ಯೋಜನೆ ಬಾಕಿಇರುವಂತಹ ಹಣವನ್ನು ಇದೇ ಕಾರ್ಯಕ್ರಮದ ವೇಳೆ ಅಥವಾ ಆನಂತರ ಹಂತ ಹಂತವಾಗಿ ಜಮಾ ಮಾಡುವ ಸಾಧ್ಯತೆ ಇದೆ ಎಂದು ಈಗ ಹಲವಾರು ಕಡೆಯಿಂದ ಮಾಹಿತಿ ದೊರೆತಿದೆ. ಆದರೆ ಇನ್ನೂ ಕೂಡ ಸರ್ಕಾರದಿಂದ ಯಾವುದೇ ರೀತಿಯಾದಂತಹ ಅಧಿಕೃತ ತೀರ್ಮಾನ ಅಥವಾ ಪ್ರಕಟಣೆ ಕೂಡ ಬಂದಿಲ್ಲ. ಮೇ 20ರ ನಂತರ ಹಣ ಜಮಾ ಆಗದೇ ಇದ್ದರೆ ಮಹಿಳೆಯರ ಆಕ್ರೋಶ ಇನ್ನು ಹೆಚ್ಚಿಗೆ ಆಗುವ ಸಾಧ್ಯತೆ ಇರುತ್ತದೆ. ಆದ ಕಾರಣ ಸರ್ಕಾರ ಈಗ ಈ ಒಂದು ಯೋಜನೆ ಹಣವನ್ನು ಬೇಗನೆ ಜಮಾ ಮಾಡುವುದು ಉತ್ತಮ. ಇಂತಹ ಮಾಹಿತಿಗಳನ್ನು ದಿನನಿತ್ಯ ತಿಳಿಯಲು ನಮ್ಮ ಮಾಧ್ಯಮಕ್ಕೆ ಹಾಗೂ ನಮ್ಮ ವಾಟ್ಸಪ್ ಗ್ರೂಪ್ಗಳಿಗೆ ಜಾಯಿನ್ ಆಗಿ.

WhatsApp Group Join Now
Telegram Group Join Now

Leave a Comment

error: Content is protected !!