Ration Card Cancelled For 2 Laksh Ration Holders: ರಾಜ್ಯದಲ್ಲಿ ಈಗ 2 ಲಕ್ಷ ಬಿಪಿಎಲ್ ರೇಷನ್ ಕಾರ್ಡ್ ಗಳು ರದ್ದು! ಇಲ್ಲಿದೆ ನೋಡಿ ಮಾಹಿತಿ.
ಈಗ ನಮ್ಮ ರಾಜ್ಯ ಸರ್ಕಾರವು ಅನರ್ಹರಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ರದ್ದು ಗೊಳಿಸುವ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು. ಈಗ ಈವರೆಗೂ ಕೂಡ 2,00,000ಕ್ಕೂ ಅಧಿಕ ರೇಷನ್ ಕಾರ್ಡ್ ಗಳನ್ನು ಈಗ ಎಪಿಎಲ್ ಕಾರ್ಡ್ಗಳಾಗಿ ಪರಿವರ್ತನೆ ಮಾಡಲಾಗಿದೆ.

ಅದೇ ರೀತಿಯಾಗಿ ಈಗ ಸರ್ಕಾರದ ಈ ಒಂದು ಕ್ರಮದಿಂದಾಗಿ ಸುಮಾರು 4.9 ಲಕ್ಷ ಫಲಾನುಭವಿಗಳು ಸರಕಾರದ ಅನ್ನಭಾಗ್ಯ ಯೋಜನೆಯಿಂದ ತೆಗೆದು ಹಾಕಲಾಗಿದೆ. ಈಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಒಂದು ಕಠಿಣ ಕ್ರಮ ಈಗ ನಕಲಿ ಕಾರ್ಡ್ ಗಳನ್ನು ತೆಗೆದು ಹಾಕಲು ಮತ್ತು ಪಡಿತರ ದುರ್ಬಳಕೆಯನ್ನು ತಡೆಗಟ್ಟುವಂಥ ಗುರಿಯನ್ನು ಇದು ಹೊಂದಿದೆ.
ಅನರ್ಹ ಬಿಪಿಎಲ್ ಕಾರ್ಡ್ ಗಳ ಮಾಹಿತಿ
ಈಗ ನಮ್ಮ ರಾಜ್ಯದಲ್ಲಿ ಕೇಂದ್ರ ಸರಕಾರದ ಮಾನದಂಡಗಳ ಅನುಸಾರವಾಗಿ 7.76 ಲಕ್ಷ ಪಡಿತರ ಚೀಟಿಗಳನ್ನು ಈಗಾಗಲೇ ಅನರ್ಹ ಎಂದು ಗುರುತಿಸಲಾಗಿದೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಈಗ ಕುಟುಂಬ ತಂತ್ರಾಂಶ ದಂತಹ ತಾಂತ್ರಿಕ ಸಾಧನಗಳ ಮೂಲಕ ಈಗಾಗಲೇ 13.87ಲಕ್ಷ ಕಾರ್ಡ್ ಗಳನ್ನೂ ಅನರ್ಹರ ಹತ್ತಿರ ಇದೆ ಎಂದು ಈಗ ಸರ್ಕಾರದ ಬೆಳಕಿಗೆ ಬಂದಿದೆ.
ಹಾಗೆ ಸರ್ಕಾರವು ಈಗ ಈ ಒಂದು ಕಾರ್ಡುಗಳನ್ನು ಆಹಾರ ಇಲಾಖೆ ಹಂತ ಹಂತವಾಗಿ ರದ್ದುಗೊಳಿಸಿದ್ದು. ಇವರಿಗೆ 2 ಲಕ್ಷ ರೇಷನ್ ಕಾರ್ಡ್ ಅನ್ನು ಈಗ ಎಪಿಎಲ್ ಗೆ ಪರಿವರ್ತನೆ ಮಾಡಲಾಗಿದೆ. ಈಗ ಈ ಒಂದು ಪ್ರಕ್ರಿಯೆಯಿಂದಾಗಿ ಸರ್ಕಾರದ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿದ್ದಂತಹ ಸುಮಾರು 4.80 ಲಕ್ಷ ಫಲಾನುಭವಿಗಳ ಪಡಿತರ ಯೋಜನೆಯನ್ನು ಹೊರಗಡೆ ಹಾಕಲಾಗಿದೆ.
ರೇಷನ್ ಕಾರ್ಡ್ ರದ್ದಾಗಲು ಕಾರಣ ಏನು?
- ಈಗ ಯಾರೆಲ್ಲಾ ಈಗ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಾರೋ ಅದು ಮುಖ್ಯ ಕಾರಣವಾಗಿದೆ.
- ಹಾಗೆ ಸರ್ಕಾರಿ ನೌಕರರು, 7 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವವರು.
- ಅಷ್ಟೇ ಅಲ್ಲದೆ ವಾರ್ಷಿಕವಾಗಿ 1.20 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಗಳಿಸುವಂತಹ ಅವರ ಕಾರ್ಡ್ ಗಳನ್ನೂ ರದ್ದು ಮಾಡಲಾಗುತ್ತದೆ.
EKYC ಕಡ್ಡಾಯ!
ಈಗ ಸರ್ಕಾರವು ನಕಲಿ ಕಾರ್ಡುಗಳನ್ನು ತಡೆಗಟ್ಟಲು ಮತ್ತು ಪಡಿತರ ವಿತರಣೆಯಲ್ಲಿ ಪಾರದರ್ಶಕತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದಾಗಿ ಈಗ ಆಹಾರ ಇಲಾಖೆಯು EKYC ಅನ್ನು ಕಡ್ಡಾಯಗೊಳಿಸಿದೆ. ಹಾಗೆ ಆಧಾರ್ ಜೋಡಣೆಯ ಮೂಲಕ ಕಾರ್ಡುದಾರರ ಗುರುತನ್ನು ಖಚಿತಪಡಿಸಿಕೊಳ್ಳುವ ಮೂಲಕ ಈ ಒಂದು ಪ್ರಕ್ರಿಯೆ ಈಗ ರಾಜ್ಯಾದ್ಯಂತ ಜಾರಿಯಲ್ಲಿ ಇದೆ.
ಹಾಗೆ ಈಗ ಇನ್ನೂ 6.16ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳ EKYC ಕೆಲಸ ಪೂರ್ಣಗೊಂಡಿಲ್ಲ. ಹೀಗಾಗಿ ಈಗ ಈ ಒಂದು ಕಾರ್ಡ್ ಗಳನ್ನೂ ಈಗ ಎಡ್ಡು ಮಾಡಲು ಸರ್ಕಾರ ಮುಂದಾಗಿದ್ದು. ಹಾಗೆಯೇ ರದ್ದುಗೊಳಿಸುವ ಸಾಧ್ಯತೆ ಇದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. ಹಾಗೆ ಹೊರ ರಾಜ್ಯಗಳಿಂದ ಬಂದಂತಹ ನೆಲೆಸಿರುವ ಸುಮಾರು 57,864 ಜನರ ಬಿಪಿಎಲ್ ಕಾಡುಗಳನ್ನು ನಕಲಿಯಾಗಿರುವುದು ಈಗ ಸರ್ಕಾರದ ಕಣ್ಣಿಗೆ ಕಂಡು ಬಿದ್ದಿದೆ.
ಒಟ್ಟಾರೆಯಾಗಿ ಸ್ನೇಹಿತರೆ ಈಗ ಈ ಒಂದು ಆಹಾರ ಇಲಾಖೆ ನೀಡಿರುವಂತಹ ಮಾಹಿತಿ ಪ್ರಕಾರ ಈಗ ಸುಮಾರು 2 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳನ್ನು ಈಗಾಗಲೇ ಎಪಿಎಲ್ ಕಾರ್ಡ್ಗೆ ಪರಿವರ್ತನೆಯನ್ನು ಮಾಡಲಾಗಿದೆ. ಆದಕಾರಣ ನೀವೇನಾದರೂ ಸುಳ್ಳು ದಾಖಲೆಗಳನ್ನು ನೀಡಿ. ರೇಷನ್ ಕಾರ್ಡ್ ಪಡೆದಿದ್ದರೆ ಈ ಕೂಡಲೇ ಅವುಗಳನ್ನು ಸರಿಪಡಿಸಿಕೊಳ್ಳಿ.