Ration Card Applying Start 2025: ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತು ರೇಷನ್ ಕಾರ್ಡ್ ವಿತರಣೆಯ ಹೊಸ ಅಪ್ಡೇಟ್! ಇಲ್ಲಿದೆ ಮಾಹಿತಿ.
ಈಗ ಕರ್ನಾಟಕ ಸರ್ಕಾರದ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ರೇಷನ್ ಕಾರ್ಡ್ ಗಳು ಈಗ ಬಡವರಿಗೆ ಜೀವನಾಡಿಯಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಕಳೆದ ಕೆಲವು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗಳು ವಿತರಣೆ ಈಗಾಗಲೇ ಸರ್ಕಾರ ಬಂದ್ ಮಾಡಿತ್ತು. ಈಗ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಆದಂತಹ ಕೆಎಚ್ ಮುನಿಯಪ್ಪ ಅವರು ಈಗ ಕೋಲಾರದಲ್ಲಿ ನಡೆದಂತಹ ಪತ್ರಿಕಾಗೋಷ್ಠಿಯಲ್ಲಿ ಈಗ ಹೊಸ ರೀತಿಯ ರೇಷನ್ ಕಾರ್ಡ್ ವಿತರಣೆ ಮತ್ತು ಅರ್ಜಿ ಪ್ರಕ್ರಿಯೆ ಈಗ ಸಂಬಂಧಿಸಿ ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಈಗ ಸಚಿವರು ಈ ಒಂದು ಸಭೆಯಲ್ಲಿ ಅಂದರೆ ಪತ್ರಿಕಾಗೋಷ್ಠಿಯ ಮೂಲಕ ಹಂಚಿಕೊಂಡಿರುವ ಮಾಹಿತಿ ಏನು ಹಾಗೂ ರೇಷನ್ ಕಾರ್ಡ್ ಹೊಸ ಅರ್ಜಿ ಸಲ್ಲಿಸಲು ಯಾವಾಗ ಅವಕಾಶವನ್ನು ನೀಡಲಾಗುತ್ತದೆ ಎಂಬುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲು ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ.
ಹೊಸ ರೇಷನ್ ಕಾರ್ಡ್ ವಿತರಣೆ ಯಾವಾಗ!
ಈಗ ಸಚಿವರು ನೀಡಿರುವಂತಹ ಮಾಹಿತಿ ಪ್ರಕಾರ ರಾಜ್ಯದ ಅರ್ಹ ಬಿಪಿಎಲ್ ಕುಟುಂಬಗಳಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈಗ ಅರ್ಹ ಇಲ್ಲದಂತ ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸಿ ಅವುಗಳನ್ನು ಎಪಿಎಲ್ ಕಾರ್ಡ್ ಗಳಾಗಿ ಪರಿವರ್ತನೆ ಮಾಡಲಾಗುತ್ತದೆ. ಈಗ ಈ ಒಂದು ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಹೊಸ ರೇಷನ್ ಕಾರ್ಡ್ ಗಳ ವಿತರಣೆಯನ್ನು ನಿಲ್ಲಿಸಲಾಗಿತ್ತು.
ಹಾಗೆ ಆಹಾರ ಇಲಾಖೆಯು ಈಗ ಸುಳ್ಳು ದಾಖಲೆಗಳ ಮೂಲಕ ಪಡೆದಂತ ಬಿಪಿಎಲ್ ಕಾರ್ಡ್ಗಳನ್ನು ಗುರುತಿಸಿ ರದ್ದುಗೊಳಿಸುವ ಕೆಲಸವನ್ನು ಈಗಾಗಲೇ ಪ್ರಾರಂಭ ಮಾಡಿದೆ. ಈಗ ಈ ಒಂದು ಪರಿಶೀಲನೆಯು ಪೂರ್ಣಗೊಂಡ ನಂತರ ನವೆಂಬರ್ 2025 ರಿಂದ ಹೊಸ ರೇಷನ್ ಕಾರ್ಡ್ ಗಳ ವಿತರಣೆ ಪ್ರಾರಂಭವಾಗುತ್ತದೆ. ಈಗ ಸರ್ಕಾರ ಈ ಒಂದು ಕ್ರಮದಿಂದಾಗಿ ಈಗ ನಿಜವಾದ ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳು ದೊರೆಯುತ್ತವೆ.
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಪ್ರಾರಂಭ ಯಾವಾಗ!
ಈಗ ನಮ್ಮ ರಾಜ್ಯ ಸರ್ಕಾರವು ಅಕ್ಟೋಬರ್ 4 2025ರಿಂದ ಅಕ್ಟೋಬರ್ 31 2025 ರ ವರೆಗೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವನ್ನು ನೀಡಿದೆ. ಈಗ ನೀವು ಕೂಡ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಕೂಡಲೇ ಹೋಗಿ ಅವುಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಈಗ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ. ಈಗ ನಿಮ್ಮ ಹತ್ತಿರ ಇರುವಂತಹ ಆನ್ಲೈನ್ ಕೇಂದ್ರಗಳಿಗೆ ನೀವು ಭೇಟಿಯನ್ನು ನೀಡಿ. ಅವರಿಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಬೇಕಾಗುವ ಅಂತಹ ಪ್ರತಿಯೊಂದು ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ನೀವು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಇಲ್ಲವೇ ನಿಮ್ಮ ಹತ್ತಿರ ಏನಾದರೂ ಇದ್ದರೆ ಆಹಾರ ಇಲಾಖೆ ಇದ್ದರೆ ನೀವು ಅಲ್ಲಿಯೂ ಕೂಡ ಹೊಸ ರೇಷನ್ ಕಾರ್ಡ್ ಗೆ ಅವಧಿಕೃತ ದಾಖಲೆಗಳನ್ನು ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಹಾಗೆ ಈಗ ಈಶ್ರಮ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಮಾತ್ರ ಮಾರ್ಚ್ 31-2026ರ ವರೆಗೆ ಆದ್ಯತೆಯ ಬಿಪಿಎಲ್ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ. ಆದ್ದರಿಂದ ಇದು ಯಾರೆಲ್ಲಾ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಕಾದುಕೋತ್ತಿದ್ದೀರಾ ಅಂತವರು ಈ ಕೂಡಲೇ ಹೋಗಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.