Education Loan: ₹50 ಲಕ್ಷದವರೆಗೆ ಬಡ್ಡಿರಹಿತ ಸಾಲ! ಅರ್ಜಿ ಸಲ್ಲಿಸಲು ಅವಕಾಶ

Education Loan: ₹50 ಲಕ್ಷದವರೆಗೆ ಬಡ್ಡಿರಹಿತ ಸಾಲ! ಅರ್ಜಿ ಸಲ್ಲಿಸಲು ಅವಕಾಶ

ಈ ಯೋಜನೆಯ ಉದ್ದೇಶವು ಹಿಂದುಳಿದ ವರ್ಗಗಳ (ಪ್ರವರ್ಗ 1, 2ಎ, 3ಎ, 3ಬಿ) ವಿದ್ಯಾರ್ಥಿಗಳಿಗೆ ವಿದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪೋಸ್ಟ್‌ಗ್ರಾಜುಯೇಟ್, ಪಿಎಚ್.ಡಿ ಮತ್ತು ಪೋಸ್ಟ್ ಡಾಕ್ಟರಲ್ ಪದವಿಗಳಿಗೆ ಅಧ್ಯಯನ ಮಾಡಲು ಆರ್ಥಿಕ ನೆರವು ಒದಗಿಸುವುದಾಗಿದೆ. ವಿಶೇಷತೆ ಎಂದರೆ ಈ ಯೋಜನೆಯಡಿ ₹50 ಲಕ್ಷದವರೆಗೆ ಸಾಲವನ್ನು ಬಡ್ಡಿರಹಿತವಾಗಿ ಪಡೆಯಬಹುದಾಗಿದೆ!

WhatsApp Float Button

Education Loan

ಅರ್ಹತೆಗೊಳಪಡುವ ಪ್ರಮುಖ ಮಾನದಂಡಗಳು

  • ಅಭ್ಯರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
  • ಕುಟುಂಬದ ವಾರ್ಷಿಕ ಆದಾಯವು ₹15 ಲಕ್ಷದ ಒಳಗಿರಬೇಕು
  • ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕ ಗಳಿಸಿರಬೇಕು
  • ವಿದ್ಯಾರ್ಥಿಗಳು QS World University Ranking 1000 ಒಳಗಿರುವ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆದಿರಬೇಕು
  • ಸಾಲ ಭದ್ರತೆಗೆ ಪೋಷಕರ ಅಥವಾ ಅಭ್ಯರ್ಥಿಯ ಸ್ಥಿರಾಸ್ತಿ ಒದಗಿಸಬೇಕು
  • ವಯೋಮಿತಿ:
    • ಸ್ನಾತಕೋತ್ತರ ಪದವಿ – ಗರಿಷ್ಠ 32 ವರ್ಷ
    • ಪಿಎಚ್.ಡಿ – ಗರಿಷ್ಠ 35 ವರ್ಷ
  • ಅರ್ಜಿದಾರರು ಅಥವಾ ಅವರ ಕುಟುಂಬದವರು ಈಗಾಗಲೇ ನಿಗಮದ ಇತರೆ ಯೋಜನೆಗಳಲ್ಲಿ ಲಾಭ ಪಡೆದಿದ್ದರೆ ಅರ್ಹರಾಗಲ್ಲ

ಇದನ್ನು ಓದಿ : Innovation Scheme:  ಆವಿಷ್ಕಾರ ಯೋಜನೆ ಗ್ರಾಮೀಣ ಆವಿಷ್ಕಾರಗಳಿಗೆ ₹4 ಲಕ್ಷದ ನೆರವು!

ಈ ಕೋರ್ಸ್‌ಗಳಿಗೆ ಅನ್ವಯಿಸುತ್ತದೆ

  • ಇಂಜಿನಿಯರಿಂಗ್ & ಟೆಕ್ನಾಲಜಿ
  • ಮ್ಯಾನೇಜ್ಮೆಂಟ್ & ಕಾಮರ್ಸ್
  • ಸೈನ್ಸ್ & ಟೆಕ್ನಾಲಜಿ
  • ಅಗ್ರಿಕಲ್ಚರ್ & ಅಲೈಡ್ ಟೆಕ್ನಾಲಜಿ
  • ಮೆಡಿಸಿನ್
  • ಹ್ಯೂಮ್ಯಾನಿಟೀಸ್ & ಸೋಷಿಯಲ್ ಸೈನ್ಸಸ್

ಸಾಲದ ವಿವರಗಳು

  • ವಾರ್ಷಿಕ ಗರಿಷ್ಠ ಮೊತ್ತ: ₹25 ಲಕ್ಷ
  • ಕೋರ್ಸ್ ಅವಧಿಗೆ ಗರಿಷ್ಠ ಮೊತ್ತ: ₹50 ಲಕ್ಷ
  • ಸಾಲದ ಮೇಲೆ ಯಾವುದೇ ಬಡ್ಡಿ ವಿಧಿಸಲಾಗುವುದಿಲ್ಲ

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಈ ಕೆಳಗಿನ ರೀತಿಗಳಲ್ಲಿ ಅರ್ಜಿ ಸಲ್ಲಿಸಬಹುದು:

  1. ಸೇವಾ ಸಿಂಧು ಪೋರ್ಟಲ್ ಮೂಲಕ
  2. ಗ್ರಾಮ ಒನ್ / ಬೆಂಗಳೂರು ಒನ್ / ಕರ್ನಾಟಕ ಒನ್ ಕೇಂದ್ರಗಳು ಮೂಲಕ

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ವಿದೇಶಿ ವಿಶ್ವವಿದ್ಯಾಲಯದಿಂದ ಲಭ್ಯವಿರುವ ಪ್ರವೇಶ ಪತ್ರ
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್‌ಬುಕ್ ಪ್ರತಿ
  • ಪಾಸ್‌ಪೋರ್ಟ್, ವೀಸಾ, ವಿಮಾನ ಟಿಕೆಟ್ ಪ್ರತಿ
  • ಪ್ರಸ್ತುತ ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸ

ಟಿಪ್: ಬ್ಯಾಂಕ್ ಖಾತೆಯು ಆಧಾರ್‌ ಜೋಡಣೆಯಾದದ್ದಾಗಿರಬೇಕು.

ಇದನ್ನು ಓದಿ : Old Age Pension: ರಾಜ್ಯದಲ್ಲಿ ಈಗ 23 ಲಕ್ಷ ಹಿರಿಯ ನಾಗರಿಕರ ಪಿಂಚಣಿ ರದ್ದು! ಇದರಲ್ಲಿ ನಿಮ್ಮ ಹೆಸರು ಇದೆಯೇ ಚೆಕ್ ಮಾಡಿಕೊಳ್ಳಿ?

ಸಾಲ ಮರುಪಾವತಿ ವಿಧಾನ

  • ಕೋರ್ಸ್ ಪೂರ್ಣಗೊಂಡ 1 ವರ್ಷದೊಳಗೆ ಅಥವಾ ಉದ್ಯೋಗ ಪ್ರಾರಂಭಿಸಿದ 6 ತಿಂಗಳೊಳಗೆ ಮರುಪಾವತಿ ಪ್ರಾರಂಭಿಸಬೇಕು
  • ಗರಿಷ್ಠ 60 ತಿಂಗಳ ಇಎಮ್ಐಗಳಲ್ಲಿ ಸಾಲವನ್ನು ಮರುಪಾವತಿಸಬೇಕು

ನಿಗಮದ ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ:
 https://dbcdc.karnataka.gov.in/kn

WhatsApp Group Join Now
Telegram Group Join Now

Leave a Comment

error: Content is protected !!